ರೈಡ್ ನೇತೃತ್ವದ ತರಬೇತುದಾರರ ತಂಡದ ಸ್ಟ್ರೈಕರ್ ವಿಭಾಗದಲ್ಲಿ ಶಿವೇಂದ್ರ ಸಿಂಗ್ ಅವರು ಕಾರ್ಯನಿರ್ವಹಿಸಲಿದ್ದಾರೆ.2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಹಾಕಿ ತಂಡ ಬೆಳ್ಳಿಪದಕ ಪಡೆದಿತ್ತು. ಶಿವೇಂದ್ರಸಿಂಗ್ ಈ ವೇಳೆ ತಂಡದಲ್ಲಿದ್ದರು. ಅದೇ ವರ್ಷ ಗುವಾಂಗ್ಝ್ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ತಂಡ ಕಂಚಿನ ಪದಕ ಪಡೆದಿತ್ತು. 2007ರಲ್ಲಿ ಏಷ್ಯಾ ಕಪ್ನಲ್ಲಿ ಚಿನ್ನ ಹಾಗೂ 2010ರಲ್ಲಿ ನಡೆದ ಸುಲ್ತಾನ್ ಅಜ್ಲಾನ್ ಶಾ ಕಪ್ ಗೆದ್ದಿದ್ದ ಭಾರತ ತಂಡದಲ್ಲಿ ಶಿವೇಂದ್ರ ಅವರು ಸದಸ್ಯರಾಗಿದ್ದರು.