ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಐಎಚ್‌ ಪ್ರೊ ಲೀಗ್‌ ಮಹಿಳಾ ಹಾಕಿ: ಭಾರತಕ್ಕೆ ಸೋಲು

Published 12 ಫೆಬ್ರುವರಿ 2024, 22:44 IST
Last Updated 12 ಫೆಬ್ರುವರಿ 2024, 22:44 IST
ಅಕ್ಷರ ಗಾತ್ರ

ರೂರ್ಕೆಲಾ: ಭಾರತದ ಮಹಿಳಾ ಹಾಕಿ ತಂಡವು ಎಫ್‌ಐಎಚ್‌ ಪ್ರೊ ಲೀಗ್‌ ಪಂದ್ಯದಲ್ಲಿ ಸೋಮವಾರ 1–2ರಿಂದ ಚೀನಾ ವಿರುದ್ಧ ಪರಾಭವಗೊಂಡಿತು.

ಪಂದ್ಯದ 7ನೇ ನಿಮಿಷದಲ್ಲಿ ಸಂಗೀತ ಕುಮಾರಿ ಅವರು ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು. ಆದರೆ, ನಂತರದಲ್ಲಿ ಚೀನಾ ಆಟಗಾರ್ತಿಯರು ಚುರುಕಿನ ಆಟವಾಡಿದರು. 14ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಸಿಕ್ಕ ಅವಕಾಶವನ್ನು ಗು ಬಿಂಗ್‌ಫೆಂಗ್ ಗೋಲಾಗಿ ಪರಿವರ್ತಿಸಿ ಸಮಬಲ ಸಾಧಿಸಿದರು. 53ನೇ ನಿಮಿಷದಲ್ಲಿ ಬಿಂಗ್‌ಫೆಂಗ್ ಮತ್ತೊಂದು ಗೋಲು ದಾಖಲಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಫೆ.3 ರಂದು ಭುವನೇಶ್ವರದಲ್ಲಿ ನಡೆದ ಹಿಂದಿನ ಪಂದ್ಯದಲ್ಲೂ ಭಾರತವು 1-2 ಅಂತರದಿಂದ ಚೀನಾ ವಿರುದ್ಧ ಪರಾಭವಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT