ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಒಲಿಂಪಿಕ್ಸ್‌ ಕ್ವಾಲಿಫೈರ್ಸ್‌ಗೆ ವಂದನಾ ಅಲಭ್ಯ

Published 3 ಜನವರಿ 2024, 15:43 IST
Last Updated 3 ಜನವರಿ 2024, 15:43 IST
ಅಕ್ಷರ ಗಾತ್ರ

ರಾಂಚಿ: ಭಾರತ ಹಾಕಿ ತಂಡದ ಮುನ್ಪಡೆ ಆಟಗಾರ್ತಿ ವಂದನಾ ಕಟಾರಿಯಾ ಅವರಿಗೆ ತರಬೇತಿ ವೇಳೆ ಕೆನ್ನೆಯ ಎಲುಬು ಮುರಿದಿದಿದೆ. ಹೀಗಾಗಿ ಅವರು ಇದೇ 13 ರಿಂದ 19ರವರೆಗೆ ನಿಗದಿಯಾಗಿರುವ ಒಲಿಂಪಿಕ್‌ ಕ್ವಾಲಿಫೈರ್ಸ್‌ ಟೂರ್ನಿಗೆ ಅಲಭ್ಯರಾಗಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಅವರ ಸ್ಥಾನಕ್ಕೆ ಯುವ ಆಟಗಾರ್ತಿ ಬಲ್ಜೀತ್ ಕೌರ್ ವಹಿಸಲಿದ್ದಾರೆ. ಅನುಭವಿ ವಂದನಾ ಅವರು ಉಪನಾಯಕಿಯೂ ಆಗಿದ್ದು, ಈಗ ಈ ಸ್ಥಾನವನ್ನು ನಿಕಿ ಪ್ರಧಾನ್ ವಹಿಸುವರು. ಒಲಿಂಪಿಕ್ಸ್‌ ಹಾಕಿಯಲ್ಲಿ ಆಡಿದ ಜಾರ್ಖಂಡ್‌ನ ಮೊದಲ ಆಟಗಾರ್ತಿ ಅವರು.

‘ವಂದನಾ ಟೂರ್ನಿಯ ಭಾಗವಾಗದಿರುವುದು ದುರದೃಷ್ಟಕರ. ತರಬೇತಿ ಅವಧಿಯಲ್ಲಿ ಅವರ ಗಲ್ಲದ ಎಲುಬಿಗೆ ಹಾನಿಯಾಗಿದೆ. ಅವರಿಗೆ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಲಾಗಿದೆ’ ಎಂದು ಚೀಫ್ ಕೋಚ್‌ ಯಾನೆಕ್ ಶೋಪ್‌ಮನ್ ತಿಳಿಸಿದರು.

ಒಲಿಂಪಿಕ್‌ ಕ್ವಾಲಿಫೈರ್ಸ್‌ನಲ್ಲಿ ಮೊದಲ ಮೂರು ಸ್ಥಾನ ಪಡೆಯುವ ತಂಡಗಳು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿವೆ. ಭಾರತ ತಂಡ ಬಿ ಗುಂಪಿನಲ್ಲಿದ್ದು, ಅಮೆರಿಕ, ನ್ಯೂಜಿಲೆಂಡ್‌, ಇಟಲಿ ತಂಡಗಳನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT