ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲಿಬಾಲ್‌ ಚಿನ್ನ ಉಳಿಸಿಕೊಂಡ ಫ್ರಾನ್ಸ್‌

ಫೈನಲ್‌ನಲ್ಲಿ ಅಗ್ರ ಕ್ರಮಾಂಕದ ಪೋಲೆಂಡ್‌ ಮೇಲೆ ನೇರ ಗೇಮ್‌ಗಳ ಜಯ
Published : 10 ಆಗಸ್ಟ್ 2024, 16:05 IST
Last Updated : 10 ಆಗಸ್ಟ್ 2024, 16:05 IST
ಫಾಲೋ ಮಾಡಿ
Comments

ಪ್ಯಾರಿಸ್‌: ಆತಿಥೇಯ ಫ್ರಾನ್ಸ್ ತಂಡ 3–0 ನೇರ ಸೆಟ್‌ಗಳಿಂದ ವಿಶ್ವದ ಅಗ್ರಮಾನ್ಯ ತಂಡ ಪೋಲೆಂಡ್‌ ಮೇಲೆ ಜಯಗಳಿಸಿ ಒಲಿಂಪಿಕ್ಸ್‌ ವಾಲಿಬಾಲ್‌ ಚಿನ್ನವನ್ನು ತನ್ನಲ್ಲೇ ಉಳಿಸಿಕೊಂಡಿತು.

ಫೈನಲ್‌ನಲ್ಲಿ ಜೀನ್‌ ಪ್ಯಾಟ್ರಿ ಬಳಗ 25–19, 25–20, 25–23ರಿಂದ ಜಯಗಳಿಸಿತು. ಪ್ಯಾಟ್ರಿ 17 ಪಾಯಿಂಟ್ಸ್‌ ಕಲೆಹಾಕಿದರೆ, ಟ್ರೆವರ್ ಕ್ಲೀವ್‌ನಾಟ್‌ 11 ಅಂಕ ಗಳಿಸಿದರು. ಅಂಟೋನಿ ಬ್ರಿಜಾರ್ಡ್‌ ಕೆಲವು ಅಮೋಘ ಬ್ಲಾಕ್‌ನೊಡನೆ ತಂಡದ ಗೆಲುವಿನಲ್ಲಿ ಗಣನೀಯ ಕಾಣಿಕೆ ನೀಡಿದರು. 

‘ಇದು ಅಮೋಘ ಜಯ. ಆರಂಭದಿಂದಲೇ ಪ್ರೇಕ್ಷಕರ ಬಲದಿಂದ ನಾವು ಮುನ್ನಡೆ ಸಾಧಿಸಿದ್ದೆವು. ಗೆಲುವಿನಲ್ಲಿ ಅವರ ಪಾತ್ರವೂ ಮುಖ್ಯವಾಯಿತು’ ಎಂದು ಕ್ಲೀವ್‌ನಾಟ್‌ ಪ್ರತಿಕ್ರಿಯಿಸಿದರು.

ಸೌತ್‌ ಪ್ಯಾರಿಸ್‌ ಅರೇನಾದಲ್ಲಿ ಫ್ರಾನ್ಸ್‌ ಗೆಲುವಿನೊಡನೆ ಆಟಗಾರರ ಜೊತೆ ಪ್ರೇಕ್ಷಕರೂ ಜೋರಾಗಿಯೇ ಸಂಭ್ರಮಿಸಿದರು.

ಈ ಹಿಂದೆ (ಅಂದಿನ) ಸೋವಿಯತ್‌ ಯೂನಿಯನ್‌ ಮತ್ತು ಅಮೆರಿಕ ತಂಡಗಳು ಮಾತ್ರ ಸತತ ಒಲಿಂಪಿಕ್ಸ್‌ಗಳಲ್ಲಿ ವಾಲಿಬಾಲ್‌ ಸ್ವರ್ಣ ಜಯಿಸಿದ್ದವು. ಈಗ ಫ್ರಾನ್ಸ್‌ ಆ ಸಾಲಿಗೆ ಸೇರಿತು.

ಅಮೆರಿಕ ಶುಕ್ರವಾರ ನಡೆದ ಪಂದ್ಯದಲ್ಲಿ ನೇರ ಸೆಟ್‌ಗಳಿಂದ ವಿಶ್ವ ಚಾಂಪಿಯನ್ ಇಟಲಿ ಮೇಲೆ ಜಯಗಳಿಸಿ ಕಂಚಿನ ಪದಕ ಗೆದ್ದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT