ಬೆಂಗಳೂರು: ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಹಾಗೂ ತಂಡದ ಇತರ ಆರು ಮಂದಿ ಆಟಗಾರ್ತಿಯರು ಹಾಗೂ ಇಬ್ಬರು ನೆರವು ಸಿಬ್ಬಂದಿ ಕೋವಿಡ್ನಿಂದ ಗುಣಮುಖರಾಗಿದ್ದಾರೆ. ಎರಡು ವಾರಗಳ ಹಿಂದೆ ಇವರೆಲ್ಲರಿಗೂ ಕೊರೊನಾ ಸೋಂಕು ದೃಢಪಟ್ಟಿತ್ತು. ಇಲ್ಲಿಯ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಕೇಂದ್ರದಲ್ಲಿ ಕ್ವಾರಂಟೈನ್ ಆಗಿದ್ದರು.

ರಾಣಿ ಅಲ್ಲದೆ ಸವಿತಾ ಪೂನಿಯಾ, ಶರ್ಮಿಳಾ ದೇವಿ, ರಜನಿ, ನವಜೋತ್ ಕೌರ್, ನವನೀತ್ ಕೌರ್ ಮತ್ತು ಸುಶೀಲಾ, ವಿಡಿಯೊ ಅನಾಲಿಸ್ಟ್ ಅಮೃತಾಪ್ರಕಾಶ್ ಹಾಗೂ ವೈಜ್ಞಾನಿಕ ಸಲಹೆಗಾರ ವೇಯ್ನ್ ಲೊಂಬಾರ್ಡ್ ಕೋವಿಡ್ನಿಂದ ಚೇತರಿಸಿಕೊಂಡವರು.

‘ಎರಡು ವಾರಗಳಿಂದ ದೂರವಾಣಿ ಕರೆ ಮತ್ತು ಸಂದೇಶಗಳ ಮೂಲಕ ನಮಗೆ ಮಾನಸಿಕ ಬೆಂಬಲ ಹಾಗೂ ಪ್ರೀತಿ ತೋರಿದ ಎಲ್ಲರಿಗೂ ಕೃತಜ್ಞತೆಗಳು. ನಾನು ಹಾಗೂ ನನ್ನ ಸಹ ಆಟಗಾರ್ತಿಯರು ಮತ್ತು ನೆರವು ಸಿಬ್ಬಂದಿ ಕೋವಿಡ್ನಿಂದ ಸಂಪೂರ್ಣ ಗುಣಮುಖವಾಗಿದ್ದೇವೆ‘ ಎಂದು ರಾಣಿ ಅವರು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.

‘ಹಾಕಿ ಸಿಬ್ಬಂದಿ, ಮಿತ್ರರು ಹಾಗೂ ಅಭಿಮಾನಿಗಳಿಂದ ಆಶೀರ್ವಾದ ಸಿಕ್ಕಿದೆ. ನಮ್ಮನ್ನು ಚೆನ್ನಾಗಿ ನೋಡಿಕೊಂಡ ಸಾಯ್ ಹಾಗೂ ಹಾಕಿ ಇಂಡಿಯಾಗೆ ವಿಶೇಷ ಧನ್ಯವಾದಗಳು‘ ಎಂದೂ ರಾಣಿ ಹೇಳಿದ್ದಾರೆ.

ದೇಶದ ಎಲ್ಲ ಜನರು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಹಾಗೂ ಕಷ್ಟದ ಸಂದರ್ಭದಲ್ಲಿ ಅಗತ್ಯ ಇರುವವರಿಗೆ ನೆರವಾಗಬೇಕು ಎಂದು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.