ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಕರವಂಡ ತಂಡಕ್ಕೆ ರೋಚಕ ಜಯ

ಕೋಳೆರ ತಂಡದ ಪರ ಹೃತಿಕ್‌ ಹ್ಯಾಟ್ರಿಕ್‌ ಗೋಲು
Published 6 ಏಪ್ರಿಲ್ 2024, 4:41 IST
Last Updated 6 ಏಪ್ರಿಲ್ 2024, 4:41 IST
ಅಕ್ಷರ ಗಾತ್ರ

ನಾಪೋಕ್ಲು (ಕೊಡಗು): ಪೆನಾಲ್ಟಿ ಶೂಟೌಟ್‌ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಕರವಂಡ ತಂಡವು ಇಲ್ಲಿನ ಚೆರಿಯಾಪರಂಬುವಿನಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿ ಕುಂಡ್ಯೋಳಂಡ ಕಪ್‌ನಲ್ಲಿ ಶುಕ್ರವಾರ ಕೋಳೆರ ತಂಡದ ವಿರುದ್ಧ 4–3 ಅಂತರದಿಂದ ರೋಚಕ ಗೆಲುವು ದಾಖಲಿಸಿತು.

ಪಂದ್ಯದ ಆರಂಭದಿಂದಲೂ ಎರಡೂ ತಂಡಗಳ ಆಟಗಾರರು ಪೈಪೋಟಿಯ ಪ್ರದರ್ಶನ ತೋರಿದವು. ಕೋಳೆರ ತಂಡದ ಹೃತಿಕ್ ಹ್ಯಾಟ್ರಿಕ್‌ ಗೋಲು ದಾಖಲಿಸಿದರಾದರೂ ಗೆಲುವಿಗೆ ಅದು ಸಾಕಾಗಲಿಲ್ಲ. 

ದಿನದ ಉಳಿದ ಪಂದ್ಯಗಳಲ್ಲಿ ಕಂಗಂಡ ತಂಡವು ಪೊರ್ಕೊಂಡ ವಿರುದ್ಧ ಹಾಗೂ ಮೇಚಂಡ ತಂಡವು ಬಳ್ಳಂಡ ವಿರುದ್ಧ 5–0 ಅಂತರದಿಂದ ಭರ್ಜರಿ ಗೆಲುವು ಸಾಧಿಸಿದವು.

ದಿನದ ಫಲಿತಾಂಶ:

ಚೆರುಮಂದಂಡ ತಂಡವು ಕೇಚೆಟ್ಟಿರ ವಿರುದ್ಧ 3–1 ಅಂತರದಿಂದ; ತೆಕ್ಕಡ ತಂಡವು ನಾಯಕಂಡ ವಿರುದ್ಧ 4–0 ಅಂತರದಿಂದ; ಕಳಂಗಡ ತಂಡವು ಆಪ್ಪಚ್ಚಿರ ವಿರುದ್ಧ 1–0 ಅಂತರದಿಂದ; ಮಂದೆಯಡ ತಂಡವು ನಂಬಿಯಪಂಡ ವಿರುದ್ಧ 1–0 ಅಂತರದಿಂದ ಜಯ ಸಾಧಿಸಿದವು.

ಇಂಡಂಡ ತಂಡವು ಚೆಟ್ಟೀರ ತಂಡವನ್ನು 1–0ರಿಂದ; ಮೀದೇರಿರ ತಂಡವು ಚೊಟ್ಟೆಯಂಡ ತಂಡವನ್ನು 1–0 ರಿಂದ; ಚೀಯಕಪೂವಂಡ ತಂಡವು ಅರಮನೆಮಾಡ ತಂಡವನ್ನು 2–0 ರಿಂದ; ಚಿಂಡಮಾಡ ತಂಡವು ಕೇಟೋಳಿರ ತಂಡವನ್ನು 2–1 ಅಂತರದಿಂದ; ಮಾನಿಪಂಡ ತಂಡವು ಕೊಟ್ಟುಕಟ್ಟೀರ ತಂಡವನ್ನು 2–0 ಅಂತರದಿಂದ; ಮಾಪಣಮಾಡ ತಂಡವು ಕುಂಚೆಟ್ಟಿರ ತಂಡವನ್ನು 2–1 ಅಂತರದಿಂದ; ಅಜ್ಜಿನಂಡ ತಂಡವು ಪುಲ್ಲೆರವನ್ನು 2–1 ಅಂತರದಿಂದ ಮಣಿಸಿದವು.

ಬೇಪಡಿಯಂಡ, ಬಾಚಿನಡಂಡ ತಂಡ ವಾಕ್‌ಓವರ್ ಪಡೆದವು. ಚಂಗುಳಂಡ- ಪಾಲೆಯಂಡ ನಡುವಿನ ಪಂದ್ಯವನ್ನು ಏ. 8ಕ್ಕೆ ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT