ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games | ಬ್ಯಾಸ್ಕೆಟ್‌ಬಾಲ್‌: ಮಹಿಳಾ ತಂಡದ ಸವಾಲು ಅಂತ್ಯ

Published 2 ಅಕ್ಟೋಬರ್ 2023, 13:26 IST
Last Updated 2 ಅಕ್ಟೋಬರ್ 2023, 13:26 IST
ಅಕ್ಷರ ಗಾತ್ರ

ಹಾಂಗ್‌ಝೌ: ಭಾರತ ಮಹಿಳಾ ತಂಡದವರು ಏಷ್ಯನ್‌ ಕ್ರೀಡಾಕೂಟದ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ 57–96 ರಿಂದ ಉತ್ತರ ಕೊರಿಯಾ ತಂಡದ ಕೈಯಲ್ಲಿ ಪರಾಭವಗೊಂಡರು.

ಶಾವೊಕ್ಸಿಂಗ್‌ ಒಲಿಂಪಿಕ್‌ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಆಟಗಾರ್ತಿಯರು ಪ್ರಬಲ ಎದುರಾಳಿಗಳಿಗೆ ತಕ್ಕ ಪೈಪೋಟಿ ನೀಡಲು ವಿಫಲರಾದರು.

ಕೊರಿಯಾ ತಂಡ ನಾಲ್ಕು ಕ್ವಾರ್ಟರ್‌ಗಳಲ್ಲೂ (26–20, 26–6, 22–17, 22–14) ಮೇಲುಗೈ ಸಾಧಿಸಿತು. ಮೊದಲ ಕ್ವಾರ್ಟರ್‌ನಲ್ಲಿ ಅಲ್ಪ ಪ್ರತಿರೋಧ ಒಡ್ಡಿದ ಭಾರತ ತಂಡ, ಆ ಬಳಿಕ ನಿರಾಸೆ ಅನುಭವಿಸಿತು.

‘ಎ’ ಗುಂಪಿನಲ್ಲಿದ್ದ ಭಾರತ, ಲೀಗ್‌ ಹಂತದಲ್ಲಿ ಇಂಡೊನೇಷ್ಯಾ (66–46) ಮತ್ತು ಮಂಗೋಲಿಯ (68–62) ತಂಡಗಳನ್ನು ಮಣಿಸಿದ್ದರೆ, ಹಾಲಿ ಚಾಂಪಿಯನ್‌ ಚೀನಾ ಎದುರು (53–111) ಸೋತಿತ್ತು.

ಉತ್ತರ ಕೊರಿಯಾ ತಂಡ ಮಂಗಳವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಚೀನಾ ವಿರುದ್ಧ ಪೈಪೋಟಿ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT