ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಕಪ್ ಜೂನಿಯರ್ ಹಾಕಿ: ಭಾರತ ತಂಡಕ್ಕೆ ಪ್ರೀತಿ ನಾಯಕಿ

Published 10 ಮೇ 2023, 13:52 IST
Last Updated 10 ಮೇ 2023, 13:52 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರತಿಭಾವಂತ ಡಿಫೆಂಡರ್ ಪ್ರೀತಿ ಅವರನ್ನು ಭಾರತ ಜೂನಿಯರ್ ಮಹಿಳಾ ಹಾಕಿ ತಂಡದ ನಾಯಕಿಯನ್ನಾಗಿ ನೇಮಕ ಮಾಡಲಾಗಿದೆ. ಫಾರ್ವರ್ಡ್ ಆಟಗಾರ್ತಿ ದೀಪಿಕಾ ಉಪನಾಯಕಿಯಾಗಿದ್ದಾರೆ.

ಬುಧವಾರ ಹಾಕಿ ಇಂಡಿಯಾ ಪ್ರಕಟಿಸಿದ ತಂಡದಲ್ಲಿ ಒಟ್ಟು 18 ಆಟಗಾರ್ತಿಯರು ಸ್ಥಾನ ಗಳಿಸಿದ್ದಾರೆ.

ಈ ತಂಡವು ಜೂನ್ 2ರಿಂದ ಜಪಾನ್ ದೇಶದ ಕಾಕಾಮಿಗಾಹರಾದಲ್ಲಿ ನಡೆಯಲಿರುವ ಜೂನಿಯರ್ ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲಿದೆ. ಎ ಗುಂಪಿನಲ್ಲಿರುವ ಭಾರತ ತಂಡವು ಕೊರಿಯಾ, ಮಲೇಷ್ಯಾ, ತೈಪೆ ಹಾಗೂ ಉಜ್ಬೇಕಿಸ್ತಾನ ತಂಡಗಳನ್ನು ಎದುರಿಸಲಿದೆ.

ಬಿ ಗುಂಪಿನಲ್ಲಿ ಆತಿಥೇಯ ಜಪಾನ್, ಚೀನಾ, ಕಜಕಸ್ತಾನ, ಹಾಂಕಾಂಗ್ ಮತ್ತು ಇಂಡೋನೆಷ್ಯಾ ತಂಡಗಳಿವೆ.

ಈ ಟೂರ್ನಿಯಲ್ಲಿ ಅಗ್ರ ಮೂರು ಸ್ಥಾನಗಳನ್ನು ಪಡೆಯುವ ತಂಡಗಳು ಜೂನಿಯರ್ ಮಹಿಳಾ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಆಡಲು ಅರ್ಹತೆ ಗಿಟ್ಟಿಸಲಿವೆ.

ತಂಡ: ಡಿಫೆಂಡರ್ಸ್: ಪ್ರೀತಿ (ನಾಯಕಿ), ಮಹಿಮಾ ಟೆಟೆ, ನೀಲಂ, ರೊಪ್ನಿ ಕುಮಾರಿ, ಅಂಜಲಿ ಬರ್ವಾ, ಮಿಡ್‌ಫೀಲ್ಡರ್ಸ್‌:  ಋತುಜಾ ದಾದಸೊ ಪಿಸಾಲ್, ಮಂಜು ಚೊರಾಸಿಯಾ, ಜ್ಯೋತಿ ಚಟ್ರಿ, ವೈಷ್ಣವಿ ವಿಠಲ್ ಫಲ್ಕೆ, ಸುಜಾತಾ ಕುಜುರ್, ಮನಶ್ರೀ ನರೇಂದ್ರ ಶೇಡಗೆ, ಫಾರ್ವರ್ಡ್ಸ್: ಮುಮ್ತಾಜ್ ಖಾನ್, ದೀಪಿಕಾ (ಉಪನಾಯಕಿ), ದೀಪಿಕಾ ಸೊರೆಂಗ್, ಅನು, ಸುನಿಲಿತಾ ಟೊಪೊ.

ಗೋಲ್‌ ಕೀಪರ್ಸ್: ಮಾಧುರಿ ಕಿಂಡೊ, ಅದಿತಿ ಮಹೇಶ್ವರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT