ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಾರತ ಆರನೇ ನಿಮಿಷದಲ್ಲಿ ಅಭಿಷೇಕ್ ಮೂಲಕ ಗೋಲಿನ ಖಾತೆ ತೆರೆಯಿತು. ಆದರೆ ಪ್ರವಾಸಿ ತಂಡವು ಪಾವ್ ಕುನಿಲ್ (14, 24ನೇ ನಿಮಿಷ), ಜೊವಾನ್ ಟರೆಸ್ (14ನೇ ನಿ.) ತೋರಿದ ಕೈಚಳಕದ ನೆರವಿನಿಂದ ಮುನ್ನಡೆ ಸಾಧಿಸಿತು. ಬಳಿಕ ಪೆಪೆ ಕುನಿಲ್ (54ನೇ ನಿ.) ಮತ್ತು ಮಾರ್ಕ್ ಮಿರಾಲ್ಲೆಸ್ (59ನೇ ನಿ.) ತಂಡಕ್ಕೆ ಮತ್ತೆರಡು ಗೋಲು ತಂದರು. ಭಾರತದ ಪರ ಹರ್ಮನ್ ಪ್ರೀತ್ ಸಿಂಗ್ (27ನೇ ನಿ.) ಮತ್ತು ಸುಖಜೀತ್ ಸಿಂಗ್ (51ನೇ ನಿ.) ತಲಾ ಒಂದು ಗೋಲು ದಾಖಲಿಸಿದರು.