ರಿಗಾ, ಲಾಟ್ವಿಯ: ಭಾರತದ ಹರಿಕಾ ದ್ರೋಣವಲ್ಲಿ ಅವರು ಇಲ್ಲಿ ನಡೆಯುತ್ತಿರುವ ಮಹಿಳೆಯರ ಫಿಡೆ ಗ್ರ್ಯಾಂಡ್ ಸ್ವಿಸ್ ಚೆಸ್ ಟೂರ್ನಿಯಲ್ಲಿ ಎರಡನೇ ಸ್ಥಾನ ಹಂಚಿಕೊಂಡರು. ಒಂಬತ್ತನೇ ಸುತ್ತಿನಲ್ಲಿ ಅವರು ರಷ್ಯಾದ ಅಲಿನಾ ಕಶಿಲಿನ್‌ಸ್ಕಯ ವಿರುದ್ಧ ಜಯ ಗಳಿಸಿದರು. ಈ ಮೂಲಕ ನಾಲ್ವರ ಜೊತೆ ಸ್ಥಾನ ಹಂಚಿಕೊಂಡರು.

ಕಪ್ಪು ಕಾಯಿಗಳೊಂದಿಗೆ ಆಡಿದ ಹರಿಕಾ ರಕ್ಷಣೆಗೆ ಹೆಚ್ಚು ಒತ್ತು ನೀಡಿದರು. ಇದು ಅವರ ಕೈ ಹಿಡಿಯಿತು. 83ನೇ ನಡೆಯಲ್ಲಿ ರಷ್ಯಾ ಆಟಗಾರ್ತಿ ಹಿಂದೆ ಸರಿದರು. ಹರಿಕಾ ಬಳಿ ಈಗ ಆರು ಪಾಯಿಂಟ್‌ಗಳಿವೆ. ಎಂಟು ಪಾಯಿಂಟ್‌ಗಳೊಂದಿಗೆ ಚೀನಾದ ಲೀ ಟಿಂಗ್ಜಿ ಮೊದಲ ಸ್ಥಾನದಲ್ಲಿದ್ದಾರೆ.

ಮುಕ್ತ ವಿಭಾಗದಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಕೆ.ಶಶಿಕಿರಣ್ ಒಂಬತ್ತನೇ ಸುತ್ತಿನಲ್ಲಿ ಪವೆಲ್ ಎಲ್ಜನೊವ್ ವಿರುದ್ದ ಜಯ ಗಳಿಸಿದರು. ಯುವ ಆಟಗಾರ ರೌನಕ್ ಸಾಧ್ವಾನಿ ಜಯ ಗಳಿಸಿದರೆ ಪಿ.ಹರಿಕೃಷ್ಣ ಮತ್ತು ನಿಹಾಲ್ ಸರೀನ್ ಡ್ರಾಗೆ ಸಮಾಧಾನಪಟ್ಟುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.