ಜಕಾರ್ತಾ: ಸತೀಶ್ ಕುಮಾರ್ ಕರುಣಾಕರನ್ ಮತ್ತು ಆದ್ಯಾ ವರಿಯಾತ್ ಜೋಡಿಯು ಇಂಡೊನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯ ಮಿಶ್ರ ವಿಭಾಗದ ಎರಡನೇ ಸುತ್ತಿಗೆ ಮುನ್ನಡೆಯಿತು. ಆದರೆ ಈ ವಿಭಾಗದಲ್ಲಿ ಭಾರತದ ಇತರ ಜೋಡಿಗಳು ಬುಧವಾರ ಹೊರಬಿದ್ದವು.

ಕರುಣಾಕರನ್ ಮತ್ತು ಆದ್ಯಾ ಜೋಡಿ ಸುಮಾರು 45 ನಿಮಿಷ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾ ತೈಪೆಯ ಯೆ ಹಾಂಗ್ ವಿ ಮತ್ತು ನಿಕೋಲ್ ಗೊನ್ವಾಲ್ವೆಸ್ ಚಾನ್ ಜೋಡಿಯನ್ನು 15–21, 21–16, 21–17 ರಿಂದ ಪರಾಭವಗೊಳಿಸಿತು.

ಆದರೆ ಭಾರತದ ಇತರ ಜೋಡಿಗಳು ಹೋರಾಟ ತೋರಲಿಲ್ಲ. ರೋಹನ್ ಕಪೂರ್ ಮತ್ತು ರುತ್ವಿಕಾ ಶಿವಾನಿ ಗದ್ದೆ ಜೋಡಿ 14–21, 9–21ರಲ್ಲಿ ಜಪಾನಿನ ಯುಇಯಿ ಶಿಮೊಗಾಮಿ– ಸಯಾಕಾ ಹೊಬರಾ ಎದುರು ನೇರ ಗೇಮ್ಗಳ ಸೋಲನುಭವಿಸಿತು.

ಅಶಿತ್ ಸೂರ್ಯ– ಅಮೃತಾ ಪ್ರಮುತೇಶ್ ಜೋಡಿ 15–21, 9–21ರಲ್ಲಿ ಡೆನ್ಮಾರ್ಕ್ನ ಮಾಡ್ಸ್ ವೆಸ್ಟರ್ಗಾರ್ಡ್– ಕ್ರಿಸ್ಟಿಯನ್ ಬುಷ್ ಜೋಡಿಯ ಎದುರು ಸೋಲನುಭವಿಸಿತು. ಧ್ರುವ್ ಕಪಿಲ– ತನಿಶಾ ಕ್ರಾಸ್ಟೊ ಜೋಡಿ ಮೂರು ಗೇಮ್ಗಳ ಸೆಣಸಾಟದಲ್ಲಿ 11–21, 21–16, 14–21ರಲ್ಲಿ ಎರಡನೇ ಶ್ರೇಯಾಂಕದ ತಾಂಗ್ ಜೀ ಚೆನ್ – ಈ ವೀ ತೊಹ್ (ಮಲೇಷ್ಯಾ) ಜೋಡಿಯೆದುರು ಹಿಮ್ಮೆಟ್ಟಿತು.

ಗಾಯತ್ರಿ–ಟ್ರಿಸಾ ಮುನ್ನಡೆ: ಮಹಿಳೆಯರ ಡಬಲ್ಸ್ ಮೊದಲ ಸುತ್ತಿನಲ್ಲಿ ಭಾರತದ ಗಾಯತ್ರಿ ಗೋಪಿಚಂದ್– ಟ್ರೀಸಾ ಜೋಳಿ 21–14, 22–20 ರಿಂದ ಉಕ್ರೇನ್ನ ಪಿ. ಬುಹ್ರೋವಾ– ವೈ. ಕಾಂಟೆಮಿರ್ ಜೋಡಿಯನ್ನು ಸೋಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.