ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನಿಯರ್‌ ಮಹಿಳಾ ಹಾಕಿ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

Last Updated 18 ಫೆಬ್ರವರಿ 2023, 12:43 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಜೂನಿಯರ್ ಮಹಿಳಾ ಹಾಕಿ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 8-1 ಗೋಲುಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಎಸ್‌.ಆರ್‌. ದೀಪಿಕಾ ಎರಡು, ಉಪ ನಾಯಕಿ ರುಜಾತಾ ದಾದಾಸೊ ಪಿಸಾಲ್, ಹೃತಿಕಾ ಸಿಂಗ್, ಸುನೆಲಿತಾ ಟೊಪ್ಪೊ, ದೀಪಿಕಾ ಸೊರೆಂಗ್ ಮತ್ತು ಅಣ್ಣು ತಲಾ ಒಂದೊಂದು ಗೋಲು ಗಳಿಸಿದ್ದಾರೆ.

ಇತ್ತ ದಕ್ಷಿಣ ಆಫ್ರಿಕಾ ಪರ ಮಿಕ್ಕೆಲಾ ಲೆ ರೌಕ್ಸ್ ಏಕೈಕ ಗೋಲು ಗಳಿಸಿದರು.

ಭಾರತೀಯ ಜೂನಿಯರ್ ಮಹಿಳಾ ತಂಡವು ಶನಿವಾರ ಮತ್ತು ಸೋಮವಾರದಂದು ದಕ್ಷಿಣ ಆಫ್ರಿಕಾದ 21 ವರ್ಷದೊಳಗಿನವರ ತಂಡದ ವಿರುದ್ಧ ಆಡಲಿದೆ. ಫೆಬ್ರುವರಿ 24, 25ರಂದು ದಕ್ಷಿಣ ಆಫ್ರಿಕಾ 'ಎ' ತಂಡದ ವಿರುದ್ಧ ಸೆಣಸಾಟ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT