ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್‌ಬಾಲ್‌: ಸೆಮಿಗೆ ಕರ್ನಾಟಕ ತಂಡಗಳು

Last Updated 8 ಡಿಸೆಂಬರ್ 2018, 17:29 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಬಾಲಕರ ಮತ್ತು ಬಾಲಕಿಯರ ತಂಡದವರು ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸಬ್‌ ಜೂನಿಯರ್‌ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಬಾಲಕರ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ 17–14ರಲ್ಲಿ ದೆಹಲಿ ತಂಡವನ್ನು ಸೋಲಿಸಿತು.

ಇದಕ್ಕೂ ಮೊದಲು ನಡೆದಿದ್ದ ಪಂದ್ಯಗಳಲ್ಲಿ ಕರ್ನಾಟಕ 16–8ರಲ್ಲಿ ಮಧ್ಯಪ್ರದೇಶ ಎದುರೂ, 15–7ರಲ್ಲಿ ಸಿಕ್ಕಿಂ ಮೇಲೂ, 28–10ರಲ್ಲಿ ಬಿಹಾರ ವಿರುದ್ಧವೂ ಗೆದ್ದಿತ್ತು.

ಬಾಲಕಿಯರ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ 17–12ರಲ್ಲಿ ಛತ್ತೀಸಗಡ ತಂಡವನ್ನು ಪರಾಭವಗೊಳಿಸಿತು.

ಇದಕ್ಕೂ ಮುನ್ನ ನಡೆದಿದ್ದ ಪಂದ್ಯಗಳಲ್ಲಿ ಕರ್ನಾಟಕ 21–6ರಲ್ಲಿ ಚಂಡೀಗಡ ಎದುರೂ, 18–6ರಲ್ಲಿ ಒಡಿಶಾ ಮೇಲೂ, 17–14ರಲ್ಲಿ ಕೇರಳ ವಿರುದ್ಧವೂ ವಿಜಯಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT