ಬೆಂಗಳೂರು: ಆತಿಥೇಯ ಬಸವನಗುಡಿ ಈಜುಕೇಂದ್ರದ ತಂಡವು ಶುಕ್ರವಾರ ಮುಕ್ತಾಯವಾದ ಎನ್ಆರ್ಜೆ ರಾಜ್ಯ ಈಜು ಚಾಂಪಿಯನ್ಷಿಪ್ನಲ್ಲಿ ಸೀನಿಯರ್ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಜಯಿಸಿತು.

512 ಅಂಕಗಳನ್ನು ಗಳಿಸಿದ ಬಸವನಗುಡಿ ತಂಡವು ಜಯಭೇರಿ ಬಾರಿಸಿತು. 158 ಅಂಕಗಳನ್ನು ಗಳಿಸಿದ ಡಾಲ್ಫಿನ್ ಅಕ್ವೆಟಿಕ್ಸ್ ತಂಡವು ರನ್ನರ್ಸ್ ಅಪ್ ಆಯಿತು.

ಜೂನಿಯರ್ ವಿಭಾಗದಲ್ಲಿಯೂ ಬಸವನಗುಡಿ ತಂಡವು 867 ಅಂಕಗಳನ್ನು ಗಳಿಸಿ ಪ್ರಶಸ್ತಿ ಜಯಿಸಿತು. ಡಾಲ್ಫಿನ್ 844 ಅಂಕಗಳೊಂದಿಗೆ ರನ್ನರ್ಸ್ ಅಪ್ ಆಯಿತು. ಸಬ್ಜೂನಿಯರ್ ವಿಭಾಗದಲ್ಲಿ ಡಾಲ್ಫಿನ್ ಅಕ್ವೆಟಿಕ್ಸ್ ಪಾರಮ್ಯ ಮೆರೆಯಿತು. 136 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆಯಿತು. ಬಸವನಗುಡಿ ತಂಡವು (124) ರನ್ನರ್ಸ್ ಅಪ್ ಆಯಿತು.

ವೈಯಕ್ತಿಕ ಮಹಿಳೆಯರ ವಿಭಾಗದಲ್ಲಿ ಡಾಲ್ಫಿನ್ ಅಕ್ವೆಟಿಕ್ಸ್ ತಂಡದ ನೀನಾ ವೆಂಕಟೇಶ್ (31 ಪಾಯಿಂಟ್) ಪ್ರಶಸ್ತಿ ಗಳಿಸಿದರು. ಡಾಲ್ಫಿನ್ ಕ್ಲಬ್ನ ವಿದಿತ್ ಎಸ್ ಶಂಕರ್ (ಒಂದನೇ ಗುಂಪು; 33 ಅಂಕ), ಹಷಿಕಾ ರಾಮಚಂದ್ರ (ಒಂದನೆ ಗುಂಪಿನ ಬಾಲಕಿಯರು; 65), ಇಶಾನ್ ಮೆಹ್ರಾ (ಎರಡನೇ ಗುಂಪು ಬಾಲಕರು: 60), ಧಿನಿಧಿ ದೇಸಿಂಗು (ಎರಡನೇ ಗುಂಪು ಬಾಲಕಿಯರು; 58), ಜಸ್ ಸಿಂಗ್ (ಮೂರನೇ ಗುಂಪು ಬಾಲಕರು, 35), ಧ್ರುತಿ ಕರಬಸವೇಶ್ವರ್ (ಮೂರನೇ ಗುಂಪು ಬಾಲಕಿಯರು; 32) ಅವರೂ ವೈಯಕ್ತಿಕ ಚಾಂಪಿಯನ್ ಆದರು. ಡೈವಿಂಗ್ನಲ್ಲಿ ಡಾಲ್ಫಿನ್ ತಂಡದ ವರುಣ್ ಸತೀಶ್ ಪೈ ಮತ್ತು ಶಖೈನಾ ಜೆ. ರಾವ್ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು.

ಅರ್ಜುನ್, ವಿಭಾಗೆ ಚಿನ್ನ: ಡಾಲ್ಫಿನ್ ತಂಡದ ಅರ್ಜುನ್ ರಾಘವನ್ (1ನ, 24.46ಸೆ) ಹಾಗೂ ವಿಭಾ ರೆಡ್ಡಿ ಮರಮ್ (1ನಿ.30.50ಸೆ) ಕ್ರಮವಾಗಿ ಮೂರನೇ ಗುಂಪಿನ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದರು. ಅರ್ಜುನ್ಗೆ ನಿಕಟ ಪೈಪೋಟಿಯೊಡ್ಡಿದ ನೆಟ್ಟಕಲ್ಲಪ್ಪ ಅಕ್ವೆಟಿಕ್ ಕೇಂದ್ರದ ಚೇತನ್ ನಾಗರಾಜ ಗಣಪ (1ನಿ, 26.82ಸೆ) ದ್ವಿತೀಯ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ವಿಭಾಗೆ ಪೈಪೋಟಿಯೊಡ್ಡಿದ ಏಕಲವ್ಯ ಸ್ಪೋರ್ಟ್ಸ್ ಅಕಾಡೆಮಿಯ ಸಿರಿ ಪ್ರೀತಮ್ ಹಾಗೂ ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್ನ ಹನ್ಸಿಕಾ ರೆಡ್ಡಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ಮೂರನೇ ಗುಂಪು, 100 ಮೀ ಬ್ರೆಸ್ಟ್ಸ್ಟ್ರೋಕ್: ಚೇತನ್ ನಾಗರಾಜ್ ಗಣಪ (ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್)–2,

ಮೂರನೇ ದಿನ ಫಲಿತಾಂಶಗಳು (ಪ್ರಥಮ ಸ್ಥಾನ ಮಾತ್ರ)

ಪುರುಷರು: ಶಾನ್ ಗಂಗೂಲಿ (ಬಸವನಗುಡಿ; 4ನಿ,39.24ಸೆ)

200ಮೀ ಫ್ರೀಸ್ಟೈಲ್: ಅನೀಷ್ ಎಸ್ ಗೌಡ (ಬಸವನಗುಡಿ; 1ನಿ, 53.34ಸೆ)

ಮೊದಲ ಗುಂಪು : ಬಾಲಕರು: 400 ಮೀ ಮೆಡ್ಲೆ: ಪವನ್ ಧನಂಜಯ್ (ಬಸವನಗುಡಿ; 4ನಿ,51.21ಸೆ).

200ಮೀ ಫ್ರೀಸ್ಟೈಲ್: ಕಾರ್ತಿಕೆಯನ್ ನಾಯರ್ (ಡಾಲ್ಫಿನ್; 1ನಿ,59.72ಸೆ)

200 ಮೀ ಬ್ಯಾಕ್ಸ್ಟ್ರೋಕ್: ಆಕಾಶ ಮಣಿ (ಬಸವನಗುಡಿ; 2ನಿ, 14.01ಸೆ)

ಎರಡನೇ ಗುಂಪು: 400ಮೀ ಮೆಡ್ಲೆ: ಪೃಥ್ವಿರಾಜ್ ಮೆನನ್ (ಬಸವನಗುಡಿ; 5ನಿ, 04.37ಸೆ)

200 ಮೀ ಫ್ರೀಸ್ಟೈಲ್: ಪಿ.ವಿ. ಮೊನಿಷ್ (ಬಸವನಗುಡಿ; 2ನಿ,03.37ಸೆ),

ಮೂರನೇ ಗುಂಪು: 100 ಮೀ ಬ್ರೆಸ್ಟ್ಸ್ಟ್ರೋಕ್: ಅರ್ಜುನ್ ರಾಘವನ್ (ಡಾಲ್ಫಿನ್; 1ನಿ,24.46ಸೆ)

ಮಹಿಳೆಯರು: 400ಮೀ ಮೆಡ್ಲೆ: ಹಷಿಕಾ ರಾಮಚಂದ್ರ (ಡಾಲ್ಫಿನ್; ನೂತನ್ ದಾಖಲೆ; 5ನಿ,19.76ಸೆ).

400ಮೀ ಮೆಡ್ಲೆ: ಎ. ಜೆಡಿಡಾ (ಡಿಕೆವಿ ಅಕ್ವೆಟಿಕ್ ಸೆಂಟರ್; 5ನಿ,26.98ಸೆ)

200 ಮೀ ಫ್ರೀಸ್ಟೈಲ್: ಅಷ್ಮಿತಾ ಚಂದ್ರ (ರೇ ಅಕ್ವೆಟಿಕ್ ಸೆಂಟರ್; 2ನಿ,14.25ಸೆ)

200 ಮೀ ಬ್ಯಾಕ್ಸ್ಟ್ರೋಕ್: ರಿಧಿಮಾ ವೀರೇಂದ್ರಕುಮಾರ್ (ಬಸವನಗುಡಿ; ನೂತನ ದಾಖಲೆ: 2ನಿ,25.19ಸೆ)

ಬಾಲಕಿಯರು:ಮೊದಲ ಗುಂಪು: ಹಷಿಕಾ ರಾಮಚಂದ್ರ (ಡಾಲ್ಫಿನ್; ನೂತನ ದಾಖಲೆ, 2ನಿ,06.51ಸೆ)

ಎರಡನೇ ಗುಂಪು: 400ಮೀ ಮೆಡ್ಲೆ: ಎಸ್. ತಾನ್ಯಾ (ಡಾಲ್ಫಿನ್; 5ನಿ,23.40ಸೆ). 200ಮೀ ಫ್ರೀಸ್ಟೈಲ್: ಧಿನಿಧಿ ದೆಸಿಂಗು (ಡಾಲ್ಫಿನ್; ನೂತನ ದಾಖಲೆ: 2ನಿ,06.38ಸೆ)

ಮೂರನೇ ಗುಂಪು: 200 ಮೀ ಫ್ರೀಸ್ಟೈಲ್: ಧ್ರುತಿ ಕರಬಸವೇಶ್ವರ (ಬೆಂಗಳೂರು ಈಜು ಅಕಾಡೆಮಿ; 2ನಿ,30.21ಸೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.