ಲಿಮಾ: ಭಾರತದ ಖುಷಿ ಅವರು ಪೆರು ರಾಜಧಾನಿ ಲಿಮಾದಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಜೂನಿಯರ್ ವಿಶ್ವ ಚಾಂಪಿಯನ್ಷಿಪ್ನಲ್ಲಿ ಮಹಿಳೆಯರ 50 ಮೀಟರ್ ರೈಫಲ್ 3 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು.

ಈ ಪದಕದೊಂದಿಗೆ ಭಾರತ ಕೂಟದಲ್ಲಿ 15 ಪದಕಗಳನ್ನು (10 ಚಿನ್ನ, ಒಂದು ಬೆಳ್ಳಿ ಮತ್ತು ನಾಲ್ಕು ಕಂಚು) ಗೆದ್ದುಕೊಂಡು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.‘

ಭಾರತದ ಶೂಟರ್ 447.3 ಪಾಯಿಂಟ್ಸ್ಗಳೊಂದಿಗೆ ಮೂರನೇ ಸ್ಥಾನ ಪಡೆದರು. ನಾರ್ವೆಯ ಸಿನೋವ್ ಬರ್ಗ್ (458.4) ಮತ್ತು ಕ್ಯಾರೋಲಿನ್ ಲುಂಡ್ (458.3) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಜಯಿಸಿದರು.

ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನದೊಂದಿಗೆ ಫೈನಲ್ಗೆ ಅರ್ಹತೆ ಪಡೆದಿದ್ದ ಖುಷಿ ಅಮೋಘ ಪ್ರದರ್ಶನ ನೀಡಿ ಪದಕಕ್ಕೆ ಕೊರಳೊಡ್ಡಿದರು.

ನಾಟಕೀಯ ಬೆಳವಣಿಗೆಯ ಬಳಿಕ ಖುಷಿ ಫೈನಲ್ ತಲುಪಿದ್ದರು. ಅರ್ಹತಾ ಸುತ್ತಿನಲ್ಲಿ ಖುಷಿ ಸೇರಿದಂತೆ ಇಟಲಿಯ ಅನ್ನಾ ಶಿಯಾವೊನ್, ಸ್ವಿಟ್ಜರ್ಲೆಂಡ್ನ ಅಲೆಕ್ಸಾ ತೇಲಾ ಮತ್ತು ಎಮೆಲಿ ಜೆಗ್ಗಿ ಅವರು ತಲಾ 585 ಪಾಯಿಂಟ್ಸ್ ಗಳಿಸಿದ್ದರು. ಟೈ ಬ್ರೇಕರ್ ಮೂಲಕ ಖುಷಿ (29) ಮತ್ತು ಅನ್ನಾ (29) ಫೈನಲ್ಗೆ ಅರ್ಹತೆ ಪಡೆದರೆ, ಸ್ವಿಟ್ಜರ್ಲೆಂಡ್ನ ಶೂಟರ್ಗಳು (27) ಹೊರಬಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.