ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಬ್ಯಾಡ್ಮಿಂಟನ್ ಪದಕ ಜಯದತ್ತ ಲಕ್ಷ್ಯ ಸೇನ್ ಕಣ್ಣು

Published 13 ಆಗಸ್ಟ್ 2023, 16:31 IST
Last Updated 13 ಆಗಸ್ಟ್ 2023, 16:31 IST
ಅಕ್ಷರ ಗಾತ್ರ

ಗುವಾಹಟಿ: ಇದೇ ತಿಂಗಳು ನಡೆಯಲಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ ಮತ್ತು ಮುಂದಿನ ತಿಂಗಳು ನಡೆಯುವ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಜಯಿಸುವುದು ತಮ್ಮ ಮುಂದಿರುವ ಎರಡು ಪ್ರಮುಖ ಗುರಿಗಳು ಎಂದು ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಹೇಳಿದ್ದಾರೆ.

ವಿಶ್ವ ಚಾಂಪಿಯನ್‌ಷಿಪ್ ಟೂರ್ನಿಯು ಇದೇ 21ರಿಂದ ಡೆನ್ಮಾರ್ಕ್‌ನ ಕೊಪನ್‌ಹೇಗನ್‌ನಲ್ಲಿ ನಡೆಯಲಿದೆ.

‘ವಿಶ್ವ ಟೂರ್ನಿಗೆ ಇನ್ನೊಂದು ವಾರ ಮಾತ್ರ ಉಳಿದಿದೆ. ಇತ್ತೀಚೆಗೆ ನಾನು ಆಡಿರುವ ಟೂರ್ನಿಗಳ ಅನುಭವ ಮತ್ತು ಕಲಿಕೆಯು ನೆರವಾಗಲಿದೆ. ವಿಶ್ವ ಟೂರ್ನಿಯಲ್ಲಿ ಉತ್ತಮ ಸಾಧನೆ ಮಾಡುವ ಭರವಸೆ ಇದೆ’ ಎಂದು ಲಕ್ಷ್ಯ ಹೇಳಿದ್ದಾರೆ. ಅವರು ಇಲ್ಲಿ ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಆರಂಭಿಸಿದ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರದ ಉದ್ಘಾಟನೆ ಸಮಾರಂಭದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಇಲ್ಲಿಯವರೆಗೆ ಮಾಡಿಕೊಂಡಿರುವ ಸಿದ್ಧತೆಯು ಉತ್ತಮವಾಗಿದೆ. ಕಳೆದ ಟೂರ್ನಿಗಳಲ್ಲಿ ಉತ್ತಮವಾಗಿ ಆಡಿದ್ದೇನೆ. ಇನ್ನು ಕೆಲವು ವಿಷಯಗಳಲ್ಲಿ ಕಲಿಯುವುದು ಮತ್ತು ಸುಧಾರಣೆ ಮಾಡಿಕೊಳ್ಳುವುದು ಇದೆ. ಅದರ ಮೇಲೆ ಚಿತ್ತ ನೆಟ್ಟಿದ್ದೇನೆ. ಇನ್ನೊಂದು ವಾರದಲ್ಲಿ ಮತ್ತಷ್ಟು ಉತ್ತಮವಾದ ಅಭ್ಯಾಸ ಮಾಡಿಕೊಂಡು ಸಿದ್ಧವಾಗುವ ವಿಶ್ವಾಸವಿದೆ ’ ಎಂದು ಲಕ್ಷ್ಯ ಹೇಳಿದರು.

’ಏಷ್ಯನ್‌ ಗೇಮ್ಸ್‌ ಬಹುದೊಡ್ಡ ಕ್ರೀಡಾಕೂಟ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕೂಟ ಇದು. ಆದ್ದರಿಂದ ವಿಶೇಷವಾಗಿದೆ. ಈ ಹಿಂದೆಯೂ ಎರಡು ಬಾರಿ ಈ ಟೂರ್ನಿಯಲ್ಲಿ ಆಡಿದ್ದೇನೆ. ಯೂತ್ ಒಲಿಂಪಿಕ್ ಮತ್ತು ಕಾಮನ್‌ವೆಲ್ತ್ ಕ್ರಿಡಾಕೂಟದಲ್ಲಿ ಆಡಿರುವೆ. ಬೇರೆ ಕ್ರೀಡೆಗಳನ್ನು ನೋಡುವ ಮತ್ತು ಆ ಕ್ರೀಡೆಯ ಆಟಗಾರರನ್ನು ಭೇಟಿಯಾಗುವ ಸದವಕಾಶ ಇದು‘ ಎಂದು 21 ವರ್ಷದ ಲಕ್ಷ್ಯ ಹೇಳಿದರು.

ಲಕ್ಷ್ಯ ಸೇನ್
ಲಕ್ಷ್ಯ ಸೇನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT