ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 WC | ವೆಸ್ಟ್‌ ಇಂಡೀಸ್ ತಂಡಕ್ಕೆ ಪುನರಾಗಮನ ಇಲ್ಲ: ಸುನಿಲ್ ನಾರಾಯಣ್

Published 23 ಏಪ್ರಿಲ್ 2024, 14:21 IST
Last Updated 23 ಏಪ್ರಿಲ್ 2024, 14:21 IST
ಅಕ್ಷರ ಗಾತ್ರ

ನವದೆಹಲಿ: ವೆಸ್ಟ್‌ ಇಂಡೀಸ್‌ ತಂಡಕ್ಕೆ ಪುನರಾಗಮನದ ‘ಬಾಗಿಲು ಮುಚ್ಚಿದೆ’ ಎಂದು ಸುನಿಲ್ ನಾರಾಯಣ್ ಹೇಳಿದ್ದಾರೆ.

ಐಪಿಎಲ್‌ ಟೂರ್ನಿಯಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ ಪರ ಅಮೋಘ ಪ್ರದರ್ಶನ ನೀಡಿದ ಬೆನ್ನಲ್ಲೇ ಅವರನ್ನು ಟಿ20 ವಿಶ್ವ ಕಪ್‌ ತಂಡಕ್ಕೆ ಕರೆಸಿಕೊಳ್ಳಬೇಕೆಂಬ ಮಾತುಗಳು ಕೇಳಿಬಂದಿದ್ದವು.

ನಾಲ್ಕು ವರ್ಷ ಕೆಳಗೆ ವೆಸ್ಟ್‌ ಇಂಡೀಸ್‌ ಟಿ20 ತಂಡದಲ್ಲಿ ಕೊನೆಯ ಬಾರಿ ಆಡಿದ್ದ ಸುನಿಲ್ ನಾರಾಯಣ್ ಕಳೆದ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

35 ವರ್ಷದ ಆಟಗಾರ ಈ ಬಾರಿಯ ಲೀಗ್‌ನಲ್ಲಿ ಒಂದು ಶತಕ, ಒಂದು ಅರ್ಧ ಶತಕ ಒಳಗೊಂಡ 286 ರನ್ ಗಳಿಸಿರುವ ಸುನಿಲ್, 7.10ರ ಇಕಾನಮಿ ದರದಲ್ಲಿ 9 ವಿಕೆಟ್‌ಗಳನ್ನೂ ಪಡೆದಿದ್ದು ಆಲ್ರೌಂಡ್‌ ಪ್ರದರ್ಶನ ನೀಡಿದ್ದಾರೆ.

ಕ್ರಿಕೆಟ್‌ಗೆ ಪುನರಾಗಮನ ಮಾಡುವಂತೆ ವೆಸ್ಟ್‌ ಇಂಡೀಸ್ ತಂಡದ ನಾಯಕ ರೋವ್ಮನ್ ಪಾವೆಲ್ ಅವರು  ಚಂದ್ರಪಾಲ್ ಅವರಿಗೆ ಒತ್ತಾಯಿಸಿದ್ದರು. ಟಿ20 ವಿಶ್ವಕಪ್‌ ಜೂನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿದೆ.

‘ನಿವೃತ್ತಿಯ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಮರಳಿ ಬರುವ ಬಾಗಿಲು ಮುಚ್ಚಿದೆ. ಜೂನ್‌ನಲ್ಲಿ ಕಣಕ್ಕಿಳಿಯುವ ವೆಸ್ಟ್‌ ಇಂಡೀಸ್‌ ಆಟಗಾರರನ್ನು ಬೆಂಬಲಿಸುತ್ತೇನೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಸುನೀಲ್ ನಾರಾಯಣ್ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT