ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ಗೆ ನಿರ್ದಿಷ್ಟ ಉಗ್ರ ಸಂಘಟನೆ ಬೆದರಿಕೆ ಇಲ್ಲ: ಕ್ರೀಡಾ ಸಚಿವ

ಪಥ ಸಂಚಲನ ಬದಲು ದೋಣಿಯಲ್ಲಿ ಸಾಗುವ ಸ್ಪರ್ಧಾಳುಗಳು
Published 4 ಏಪ್ರಿಲ್ 2024, 4:19 IST
Last Updated 4 ಏಪ್ರಿಲ್ 2024, 4:19 IST
ಅಕ್ಷರ ಗಾತ್ರ

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ಗೆ ಯಾವುದೇ ನಿರ್ದಿಷ್ಟ ಉಗ್ರ ಸಂಘಟನೆಯ ಬೆದರಿಕೆ ಬಂದಿಲ್ಲ. ಆಯೋಜಕರು ನಿಗದಿಯಂತೆ ಉದ್ಘಾಟನಾ ಸಮಾರಂಭವನ್ನು ಸೀನ್ ನದಿಯಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ ಎಂದು ಕ್ರೀಡಾ ಸಚಿವರು ಬುಧವಾರ ಹೇಳಿದ್ದಾರೆ.

ಕಳೆದ ತಿಂಗಳು ಮಾಸ್ಕೋ ಸಂಗೀತ ಸಭಾಂಗಣದ ಮೇಲೆ ನಡೆದ ದಾಳಿಯಲ್ಲಿ 140 ಜನರು ಸಾವನ್ನಪ್ಪಿದ್ದು, ಜುಲೈ 26 ರಿಂದ ಪ್ರಾರಂಭವಾಗುವ ಪ್ಯಾರಿಸ್ ಕ್ರೀಡಾಕೂಟದ ಮೇಲೆಯೂ ಆತಂಕ ಮೂಡಿಸಿದೆ. 

‘ಇದುವರೆಗೆ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕೂಟಗಳನ್ನು ಗುರಿಯಾಗಿಸಿಕೊಂಡು ಯಾವುದೇ ನಿರ್ದಿಷ್ಟ ಭಯೋತ್ಪಾದನೆ ಸಂಬಂಧಿತ ಬೆದರಿಕೆ ಬಂದಿಲ್ಲ‘ ಎಂದು ಕ್ರೀಡಾ ಸಚಿವೆ ಅಮೇಲಿ ಔಡಿಯಾ-ಕ್ಯಾಸ್ಟೆರಾ ಅವರು ಫ್ರಾನ್ಸ್ 2 ಚಾನೆಲ್‌ಗೆ ತಿಳಿಸಿದರು.

ಸೀನ್‌ನಲ್ಲಿನ ಉದ್ಘಾಟನಾ ಸಮಾರಂಭ ನಡೆಸುವುದು ನಮ್ಮ ಮೂಲ ಯೋಜನೆ. ಆದರೆ  ಒಂದು ವೇಳೆ ಕೈಗೂಡದಿದ್ದಲ್ಲಿ ಪರ್ಯಾಯವಾಗಿ ಸಮಾರಂಭ ನಡೆಸಲು ತೆರೆಮರೆಯಲ್ಲಿ ತಯಾರಿ ನಡೆಸಲಾಗುತ್ತಿದೆ ಎಂದರು. 

ಕ್ರೀಡೆಗಳ ಆರಂಭಕ್ಕೂ ಮುನ್ನ, ಅಥ್ಲೀಟ್‌ಗಳು ಕ್ರೀಡಾಂಗಣದಲ್ಲಿ ಪಥ ಸಂಚಲನ ನಡೆಸುವುದು ಸಂಪ್ರದಾಯ. ಈ ಬಾರಿ ಸ್ಪರ್ಧಾಳುಗಳು ಚಿಕ್ಕ ದೋಣಿಗಳ ಮೂಲಕ ಸಾಗುವರು. 5 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಹಾಗೂ ಅಕ್ಕಪಕ್ಕದ ಕಟ್ಟಡಗಳಿಂದ ವೀಕ್ಷಿಸುವವರು ಈ ನೌಕಾಯಾನ ಸಾಹಸಕ್ಕೆ ಸಾಕ್ಷಿಯಾಗಲಿದ್ದಾರೆ.

ಈ ಹಿಂದೆ 1972ರಲ್ಲಿ ಮ್ಯೂನಿಚ್‌ ಒಲಿಂಪಿಕ್ಸ್‌ ವೇಳೆ ಭಯೋತ್ಪಾದನಾ ದಾಳಿ ನಡೆದಿತ್ತು. 1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲೂ ದಾಳಿಗೆ ಸಂಚು ನಡೆದಿತ್ತು.

ಉದ್ಘಾಟನಾ ಸಮಾರಂಭದ ಪೂರ್ವಾಭ್ಯಾಸವು ಮೇ 27 ಮತ್ತು ಜೂನ್ 17 ರಂದು ನದಿಯಲ್ಲಿ ನಡೆಯಲಿದೆ ಎಂದು ಔಡಿಯಾ-ಕ್ಯಾಸ್ಟೆರಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT