ಪ್ಯಾರಿಸ್: ಭಾರತದ ಜೂಡೊ ಸ್ಪರ್ಧಿ ತೂಲಿಕಾ ಮಾನ್ ಅವರು ಒಲಿಂಪಿಕ್ಸ್ ಮಹಿಳೆಯರ +78 ಕೆ.ಜಿ. ವಿಭಾಗದಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದರು. ಲಂಡನ್ ಒಲಿಂಪಿಕ್ಸ್ ಚಾಂಪಿಯನ್ ಇದಾಲಿಸ್ ಆರ್ಟಿಝ್ ಅವರು ಶುಕ್ರವಾರ ನಡೆದ ಈ ಸ್ಪರ್ಧೆಯಲ್ಲಿ ತೂಲಿಕಾ ಅವರನ್ನು ಮಣಿಸಿದರು.
ದೆಹಲಿಯ 25 ವರ್ಷ ವಯಸ್ಸಿನ ತೂಲಿಕಾ 2022ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದರು. ಆದರೆ ಒಲಿಂಪಿಕ್ಸ್‌ನಲ್ಲಿ ಒಂದು ಚಿನ್ನ, ಎರಡು ಬೆಳ್ಳಿ, ಕಂಚು ಸೇರಿದಂತೆ ನಾಲ್ಕು ಪದಕಗಳನ್ನು ಗೆದ್ದಿರುವ ಕ್ಯೂಬಾದ ಸ್ಪರ್ಧಿಗೆ, ತೂಲಿಕಾ ಚಾಂಪ್–ಡಿ–ಅರೇನಾದಲ್ಲಿ ಹೆಚ್ಚು ಪೈಪೋಟಿ ನಿಡಲಿಲ್ಲ. ಇದಾಲಿಸ್ 10–0ಯಿಂದ ಗೆದ್ದರು.
ಕೇವಲ 28 ಸೆಕೆಂಡುಗಳಲ್ಲಿ ಈ ಸೆಣಸಾಟ ಕೊನೆಗೊಂಡಿತು,