ದೋಹಾ: ಭಾರತದ ಟೇಬಲ್ ಟೆನಿಸ್ ಪಟುಗಳಾದ ಮಣಿಕಾ ಬಾತ್ರಾ– ಶರತ್ ಕಮಲ್ ಜೋಡಿಯು ಮಿಶ್ರ ಡಬಲ್ಸ್ ವಿಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸಿದ್ದಾರೆ.ಇಲ್ಲಿ ನಡೆಯುತ್ತಿರುವ ಏಷ್ಯನ್ ಅರ್ಹತಾ ಟೂರ್ನಿಯ ಫೈನಲ್ನಲ್ಲಿ ಮಣಿಕಾ–ಶರತ್ ಅವರು ಕೊರಿಯದ ಸ್ಯಾಂಗ್ ಸು ಲೀ–ಜೀ ಜಿಯೊನ್ ಅವರನ್ನು ಸೋಲಿಸುವ ಮೂಲಕ ಜೋಡಿ ವಿಭಾಗದಲ್ಲಿ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಿದ ಭಾರತದ ಮೊದಲ ಪಟುಗಳು ಎಂಬ ಶ್ರೇಯ ಗಳಿಸಿದ್ದಾರೆ.

ಅಂತಿಮ ಪಂದ್ಯದಲ್ಲಿ ಎರಡು ಸೆಟ್ಗಳ ಹಿನ್ನಡೆಯಿಂದ ಚೇತರಿಸಿಕೊಂಡ ಭಾರತದ ಜೋಡಿಯು 8–11,6-11, 11-5, 11-6, 13-11, 11-8ರಿಂದ ಎದುರಾಳಿಗಳನ್ನು ಪರಾಭವಗೊಳಿಸಿದರು.

ಜಿ. ಸತ್ಯನ್ ಅವರೊಂದಿಗೆ ಸಿಂಗಲ್ಸ್ ವಿಭಾಗದಲ್ಲೂ ಶರತ್ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಿದ್ದು, ಟೋಕಿಯೊ ಕೂಟದಲ್ಲಿ ಕನಿಷ್ಠ ಕ್ವಾರ್ಟರ್ಫೈನಲ್ಗೆ ತಲುಪುವ ಗುರಿ ಇಟ್ಟುಕೊಂಡಿದ್ದಾರೆ.

ಮಣಿಕಾ–ಶರತ್ ಜೋಡಿಯು ಶುಕ್ರವಾರ ಸಿಂಗಪುರದ ಕಿಯೊನ್ ಪಾಂಗ್ ಯಿವ್ ಎನ್–ಲಿನ್ ಎ ಅವರನ್ನು ಮಣಿಸಿ ಫೈನಲ್ಗೆ ಕಾಲಿಟ್ಟಿತ್ತು.

ಸತ್ಯನ್ ಹಾಗೂ ಸುತೀರ್ಥಾ ಮುಖರ್ಜಿ ಅವರು ದಕ್ಷಿಣ ಏಷ್ಯನ್ ಅರ್ಹತಾ ಸುತ್ತಿನಲ್ಲಿ ಗೆಲುವು ದಾಖಲಿಸಿ ಕ್ರಮವಾಗಿ ಮಹಿಳಾ ಹಾಗೂ ಪುರುಷರ ಸಿಂಗಲ್ಸ್ ವಿಭಾಗಗಳಲ್ಲಿ ಶುಕ್ರವಾರ ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸಿದ್ದರು. ಎರಡನೇ ಸ್ಥಾನ ಗಳಿಸಿದ ಗರಿಷ್ಠ ಕ್ರಮಾಂಕದ ಆಟಗಾರ ಮತ್ತು ಆಟಗಾರ್ತಿಯಾಗಿ ಶರತ್ ಹಾಗೂ ಮಣಿಕಾ ಕೂಡ ಸಿಂಗಲ್ಸ್ ವಿಭಾಗಗಳಲ್ಲಿ ಟೋಕಿಯೊ ಟಿಕೆಟ್ ಖಚಿತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.