ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ ಶೂಟಿಂಗ್ ಟ್ರಯಲ್ಸ್‌: ಸಿಫ್ಟ್‌ ಕೌರ್‌, ನೀರಜ್‌ಗೆ ಅಗ್ರಸ್ಥಾನ

Published 24 ಏಪ್ರಿಲ್ 2024, 15:46 IST
Last Updated 24 ಏಪ್ರಿಲ್ 2024, 15:46 IST
ಅಕ್ಷರ ಗಾತ್ರ

ನವದೆಹಲಿ: ಏಷ್ಯನ್ ಗೇಮ್ಸ್‌ ಸ್ವರ್ಣ ವಿಜೇತೆ ಸಿಫ್ಟ್‌ ಕೌರ್‌ ಸಮ್ರಾ ಅವರು ಮೊದಲ ಒಲಿಂಪಿಕ್‌ ಟ್ರಯಲ್ಸ್‌ನ ಮಹಿಳೆಯರ 50 ಮೀ. ರೈಫಲ್‌–3 ಪೊಸಿಷನ್ಸ್‌ ಸ್ಪರ್ಧೆಯಲ್ಲಿ ವಿಜೇತರಾದರು. ಬುಧವಾರ ನಡೆದ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ನೀರಜ್‌ ಕುಮಾರ್, ನಾಲ್ಕು ಎದುರಾಳಿಗಳ ಸ್ಪರ್ಧೆಯನ್ನು ಮೀರಿ ವಿಜೇತರಾದರು.

ಈ ಸ್ಪರ್ಧೆಯಲ್ಲಿ ವಿಶ್ವದಾಖಲೆ ಹೊಂದಿರುವ ಸಿಫ್ಟ್‌, ಮೊದಲ 15 ‘ನೀಲಿಂಗ್‌ ಪೊಸಿಷನ್‌’ ಶಾಟ್‌ಗಳ ನಂತರ  ಅಶಿ ಚೋಸ್ಕಿ ಎದುರು ಹಿನ್ನಡೆಯಲ್ಲಿದ್ದರು. ಆದರೆ ಸಿಫ್ಟ್‌ ನಂತರ ಚೇತರಿಸಿ ಮುನ್ನಡೆದರು. ಅಂತಿಮವಾಗಿ ಸಿಫ್ಟ್‌ 466.4 ಸ್ಕೋರ್ ಪಡೆದರೆ, ಆಶಿ 462.6 ಸ್ಕೋರ್‌ ಗಳಿಸಿದರು. ಒಲಿಂಪಿಯನ್‌ ಅಂಜುಮ್ ಮೌದ್ಗಿಲ್‌ (449.2) ಮೂರನೇ ಸ್ಥಾನ ಪಡೆದರು.

ನಿಶ್ಚಲ್‌ (433.6) ಮತ್ತು ಪ್ಯಾರಿಸ್‌ ಕೋಟಾ ವಿಜೇತ ಶ್ರೀಯಾಂಕಾ ಸದಂಗಿ (416.7) ಅವರು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಕ್ಕೆ ಸರಿದರು.

ಪುರುಷರ 50 ಮೀ. ರೈಫಲ್‌ 3 ಪೊಸಿಷನ್‌ ಸ್ಪರ್ಧೆಯಲ್ಲಿ ನೀರಜ್‌, 462.2 ಸ್ಕೋರ್‌ ಗಳಿಸಿ ಗೆಲ್ಲುವ ಹಾದಿಯಲ್ಲಿ ಕೆಲವು ನೆಚ್ಚಿನ ಸ್ಪರ್ಧಿಗಳನ್ನು ಹಿಂದೆಹಾಕಿದರು.

ಪ್ಯಾರಿಸ್‌ ಒಲಿಂಪಿಕ್ಸ್‌ ಕೋಟಾ ಹೊಂದಿರುವ ಸ್ವಪ್ನಿಲ್ ಕುಸಲೆ (460.9) ಎರಡನೇ ಸ್ಥಾನ ಗಳಿಸಿದರೆ, ಐಶ್ವರಿ ತೋಮಾರ್‌ (450.5) ಮೂರನೇ ಸ್ಥಾನ ಗಳಿಸಿದರು. ಚೈನ್ ಸಿಂಗ್‌ (439.8) ಮತ್ತು ಅಖಿಲ್‌ ಶೆವೊರಾನ್ (429.1) ಕ್ರಮವಾಗಿ ನಾಲ್ಕು ಮತ್ತು ಐದನೆಯವರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT