ಹೊ ಚಿ ಮಿನ್ ಸಿಟಿ: ಭಾರತದ ಸಿಕ್ಕಿ ರೆಡ್ಡಿ– ರೋಹನ್ ಕಪೂರ್ ಜೋಡಿ ವಿಯೆಟ್ನಾಂ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಿಶ್ರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ಗುರುವಾರ ನಡೆದ ಪಂದ್ಯದಲ್ಲಿ ಭಾರತದ ಜೋಡಿ 21-10, 19-21, 21-18 ರಲ್ಲಿ ಹಾಂಗ್ಕಾಂಗ್ನ ಫನ್ ಕಾ ಯಾನ್– ಯುಂಗ್ ಶಿಂಗ್ ಚೊಯ್ ಎದುರು ಗೆದ್ದಿತು.
ಪುರುಷರ ಸಿಂಗಲ್ಸ್ನಲ್ಲಿ ಭಾರತದ ಋತ್ವಿಕ್ ಸಂಜೀವ್ ಸತೀಶ್ ಕುಮಾರ್ 19-21, 21-17, 21-19 ರಲ್ಲಿ ಮಲೇಷ್ಯಾದ ಆಂಗ್ ಕೆನ್ ಯೊನ್ ಎದುರು ಪರಾಭವಗೊಂಡರು.