ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್‌: ಜೈನ್ ವಿವಿಗೆ ಗೆಲುವು

Published 26 ಡಿಸೆಂಬರ್ 2023, 16:09 IST
Last Updated 26 ಡಿಸೆಂಬರ್ 2023, 16:09 IST
ಅಕ್ಷರ ಗಾತ್ರ

ಬೆಂಗಳೂರು: ಅಭಾ ಅವರ ಆಟದ ಬಲದಿಂದ ಜೈನ್ ವಿಶ್ವವಿದ್ಯಾಲಯ ತಂಡವು ಮಂಗಳವಾರ ದಕ್ಷಿಣ ವಲಯ ಅಂತರ ವಿ.ವಿ ಮಹಿಳಾ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 47–16 ರಿಂದ ಮಂಗಳೂರು ವಿವಿ ತಂಡವನ್ನು ಸುಲಭವಾಗಿ ಮಣಿಸಿತು.

ಜೈನ್‌ ವಿ.ವಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆತಿಥೇಯ ತಂಡದ ಅಭಾ 13 ಪಾಯಿಂಟ್ಸ್‌ ಗಳಿಸಿ ಮಿಂಚಿದರು. ಮೈಸೂರು ವಿ.ವಿ ತಂಡವು 61–33ರಿಂದ ಅಣ್ಣಾಮಲೈ ವಿ.ವಿ ತಂಡವನ್ನು ಮಣಿಸಿತು.

ಪಂದ್ಯಗಳ ಫಲಿತಾಂಶ:

ಜೈನ್‌ ವಿವಿ 47–16ರಿಂದ ಮಂಗಳೂರು ವಿವಿ ವಿರುದ್ಧ; ಹಿಂದೂಸ್ತಾನ್‌ ವಿವಿ 67–29ರಿಂದ ವಿಟಿಯು ವಿರುದ್ಧ; ಕ್ರೈಸ್ಟ್‌ ವಿವಿ 48–43ರಿಂದ ಅನ್ನಾ ವಿವಿ ವಿರುದ್ಧ, ಕೇರಳ ವಿವಿ 41–19ರಿಂದ ಎಪಿಜೆ ಅಬ್ದುಲ್‌ ಕಲಾ ವಿವಿ ವಿರುದ್ಧ; ಮೈಸೂರು ವಿವಿ 61–33ರಿಂದ ಅಣ್ಣಾಮಲೈ ವಿವಿ ವಿರುದ್ಧ; ಬಾರಥಿಯಾರ್ ವಿವಿ 47–9ರಿಂದ ಗೀತಂ ವಿವಿ ವಿರುದ್ಧ; ವೆಲ್ಸ್‌ ವಿವಿ 69–39ರಿಂದ ಆದಿಕವಿ ವಿವಿ ವಿರುದ್ಧ; ಹಿಂದೂಸ್ತಾನ್‌ ವಿವಿ 69–48ರಿಂದ ಮೈಸೂರು ವಿವಿ ವಿರುದ್ಧ ಗೆಲುವು ಸಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT