ನವದೆಹಲಿ: ಚಿನ್ನದ ಪದಕಗಳನ್ನ ಬೇಟೆಯಾಡಿದ ಭಾರತದ ಅಥ್ಲೀಟ್‌ಗಳು ಅಬುಧಾಬಿಯಲ್ಲಿ ಮುಕ್ತಾಯಗೊಂಡ ವಿಶೇಷ ಒಲಿಂಪಿಕ್ಸ್‌ನಲ್ಲಿ ಒಟ್ಟು 386 ಪದಕಗಳೊಂದಿಗೆ ಮರಳಿದ್ದಾರೆ.

ಒಟ್ಟು 284 ಅಥ್ಲೀಟ್‌ಗಳು ಕೂಟದಲ್ಲಿ ಪಾಲ್ಗೊಂಡಿದ್ದರು.

154 ಬೆಳ್ಳಿ ಮತ್ತು 129 ಕಂಚಿನ ಪಕದಗಳನ್ನೂ ಭಾರತ ಗೆದ್ದಿದೆ. ಪವರ್‌ಲಿಫ್ಟರ್‌ಗಳು ಅತ್ಯಧಿಕ 20 ಚಿನ್ನ, 33 ಬೆಳ್ಳಿ ಮತ್ತು 43 ಕಂಚಿನ ಪದಕಗಳನ್ನು ಗಳಿಸಿದ್ದಾರೆ.

ರೋಲರ್ ಸ್ಕೇಟರ್‌ಗಳು 13 ಚಿನ್ನ ಮತ್ತು 20 ಬೆಳ್ಳಿಯೊಂದಿಗೆ ಒಟ್ಟು 49 ಪದಕಗಳನ್ನು ಬಗಲಿಗೆ ಹಾಕಿಕೊಂಡಿದ್ದಾರೆ.

ಸೈಕ್ಲಿಂಗ್‌ನಲ್ಲೂ ಭಾರತದ ಸಾಧನೆ ಗಮನಾರ್ಹವಾಗಿತ್ತು. ಒಟ್ಟು 11 ಚಿನ್ನ, 14 ಬೆಳ್ಳಿ ಮತ್ತು 20 ಕಂಚಿನ ಪದಕಗಳು ಸೈಕ್ಲಿಸ್ಟ್‌ಗಳ ಪಾಲಾಗಿವೆ. ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲೂ ಭಾರತದ ಕ್ರೀಡಾಪಟುಗಳು ಮಿಂಚಿದ 39 ಪದಕ ಗಳಿಸಿದರು. ಇದರಲ್ಲಿ ಐದು ಚಿನ್ನ ಮತ್ತು 24 ಬೆಳ್ಳಿ ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.