ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಈಜು: ಚಾರಣಿ ಕೂಟ ದಾಖಲೆ

Published 8 ಜುಲೈ 2024, 19:55 IST
Last Updated 8 ಜುಲೈ 2024, 19:55 IST
ಅಕ್ಷರ ಗಾತ್ರ

ಬೆಂಗಳೂರು: ಗ್ಲೋಬಲ್‌ ಈಜು ಕೇಂದ್ರದ ಶ್ರೀಚಾರಣಿ ತುಮು ಅವರು ಬಸವನಗುಡಿ ಅಕ್ವಾಟಿಕ್ ಸೆಂಟರ್‌ನಲ್ಲಿ ನಡೆಯುತ್ತಿರುವ ಎನ್‌ಆರ್‌ಜೆ ರಾಜ್ಯ ಸಬ್‌ ಜೂನಿಯರ್‌ ಮತ್ತು ಜೂನಿಯರ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಬಾಲಕಿಯರ (1ಬಿ ಗುಂಪು) 800 ಮೀಟರ್‌ ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಕೂಟ ದಾಖಲೆಯೊಂದಿಗೆ ಪ್ರಶಸ್ತಿ ಗೆದ್ದರು.

ಸೋಮವಾರ ನಡೆದ ಸ್ಪರ್ಧೆಯಲ್ಲಿ ಚಾರಿಣಿ 9 ನಿಮಿಷ 19.80 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಆತಿಥೇಯ ಬಿಎಸಿ ಕೇಂದ್ರದ ಮೀನಾಕ್ಷಿ ಮೆನನ್ ಮತ್ತು ತನೀಶಾ ವಿಜಯ್‌ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು.

ಫಲಿತಾಂಶ:

ಬಾಲಕರು: 1ಎ: 800 ಮೀ. ಫ್ರೀಸ್ಟೈಲ್‌: ಎಸ್‌.ದರ್ಶನ್‌ (ಬಿಎಸಿ, 8 ನಿ.40.06 ಸೆ). 1ಬಿ 800 ಮೀ. ಫ್ರೀಸ್ಟೈಲ್‌: ಮೋನಿಷ್‌ ಪಿ.ವಿ. (ಬಿಎಸಿ, 8 ನಿ. 59.29 ಸೆ). 2ಎ: 1500 ಮೀ. ಫ್ರೀಸ್ಟೈಲ್‌: ಅಕ್ಷಜ್ ಪಿ. (ಬಿಎಸಿ, 17 ನಿ.36.11ಸೆ). 2ಬಿ: 1500 ಮೀ. ಫ್ರೀಸ್ಟೈಲ್‌: ಶರಣ್‌ ಎಸ್‌ (ಮತ್ಸ್ಯ, 17 ನಿ.15.16ಸೆ). 2ಸಿ 1500 ಮೀ. ‍ಫ್ರೀಸ್ಟೈಲ್‌: ಜಸ್ ಸಿಂಗ್ (ಎಸಿಇ, 18 ನಿ.30.68 ಸೆ).

ಬಾಲಕಿಯರು: 1ಎ: 800ಮೀ ಫ್ರೀಸ್ಟೈಲ್: ಶಿರಿನ್ (ಬಿಎಸಿ, 9 ನಿ.28.57 ಸೆ). 1ಬಿ: 800ಮೀ ಫ್ರೀಸ್ಟೈಲ್: ಶ್ರೀ ಚರಣಿ ತುಮು (ಗ್ಲೋಬಲ್ ಸ್ವಿಮ್ ಸೆಂಟರ್, 9 ನಿ.19.80 ಸೆ). 2ಎ: 1500ಮೀ ಫ್ರೀಸ್ಟೈಲ್: ಡಿಂಪಲ್ ಸೋನಾಕ್ಷಿ ಎಂ. ಗೌಡ (ಡಾಲ್ಫಿನ್, 19 ನಿ. 23.67 ಸೆ). 2ಬಿ: 1500 ಮೀ ಫ್ರೀಸ್ಟೈಲ್: ಧನ್ಯ ನಟರಾಜ್ ನಾಯ್ಕ್ (ಬಿಎಸ್‌ಎ,  19 ನಿ. 49.86 ಸೆ). 2ಸಿ: 1500ಮೀ ಫ್ರೀಸ್ಟೈಲ್: ಧೃತಿ ಕರಿಬಸವೇಶ್ವರ (ಎಸಿಇ, 20 ನಿ 15.20 ಸೆ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT