ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌: ಕ್ವಾರ್ಟರ್ ಫೈನಲ್‌ ಹಣಾಹಣಿ

ಕರ್ನಾಟಕ ಮಹಿಳೆಯರಿಗೆ ಕೇರಳ ಸವಾಲು
Last Updated 7 ಏಪ್ರಿಲ್ 2022, 13:56 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಮಹಿಳಾ ತಂಡ ಚೆನ್ನೈಯಲ್ಲಿ ನಡೆಯುತ್ತಿರುವ 71ನೇ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಕೇರಳ ತಂಡವನ್ನು ಎದುರಿಸಲಿದೆ.

ನೆಹರು ಕ್ರೀಡಾಂಗಣದಲ್ಲಿ ಗುರುವಾರ ನಡೆದ ಕೊನೆಯ ಲೀಗ್‌ ಪಂದ್ಯದಲ್ಲಿ ಕರ್ನಾಟಕ ತಂಡದವರು ಅಸ್ಸಾಂ ವಿರುದ್ಧ 80–47ರಲ್ಲಿ ಗೆಲುವು ಸಾಧಿಸಿದರು. ಈ ಮೂಲಕ ನಾಕೌಟ್ ಹಂತಕ್ಕೆ ಪ್ರವೇಶಿಸಿದರು. ಅಸ್ಸಾಂ ಕೂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು ಭಾರತೀಯ ರೈಲ್ವೆ ತಂಡವನ್ನು ಎದುರಿಸಲಿದೆ. ತಮಿಳುನಾಡು ತಂಡ ಪಂಜಾಬ್ ವಿರುದ್ಧ ಮತ್ತು ತೆಲಂಗಾಣ ತಂಡ ಮಧ್ಯಪ್ರದೇಶ ಎದುರು ಸೆಣಸಲಿದೆ.

21 ಪಾಯಿಂಟ್ ಗಳಿಸಿದ ಚಂದನ ಅವರು ಅಸ್ಸಾಂ ಎದುರಿನ ಪಂದ್ಯದಲ್ಲಿ ಕರ್ನಾಟಕದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ರಿನಿ 14 ಮತ್ತು ಲೋಪಾಮುದ್ರ 13 ಪಾಯಿಂಟ್ ಕಲೆ ಹಾಕಿದರು. ಅಸ್ಸಾಂಗಾಗಿ ರೀನಾ ಪಟೇಲ್ ಮತ್ತು ಜೋನಲ್ ದತ್ತ ತಲಾ 11, ಗೀತಾ ಸಹಾನಿ 10 ಪಾಯಿಂಟ್ ಗಳಿಸಿದರು.

ಕರ್ನಾಟಕಕ್ಕೆ 2ನೇ ಗೆಲುವು

ಪುರುಷರ ವಿಭಾಗದಲ್ಲಿ ಪಂಜಾಬ್ ವಿರುದ್ಧ 90–81ರಲ್ಲಿ ಗೆದ್ದ ಕರ್ನಾಟಕ ‘ಇ’ ಗುಂಪಿನಲ್ಲಿ ಎರಡನೇ ಜಯ ದಾಖಲಿಸಿಕೊಂಡಿತು. ಅರವಿಂದ 30 ಪಾಯಿಂಟ್ ಕಲೆ ಹಾಕಿದರೆ ಅನಿಲ್ ಕುಮಾರ್ ಬಿ.ಕೆ 22 ಮತ್ತು ಹರೀಶ್ ಮುತ್ತು ಕುಮಾರ್ 12 ಪಾಯಿಂಟ್ ಗಳಿಸಿದರು. ಪಂಜಾಬ್‌ ಪರವಾಗಿ ತಜಿಂದರ್ ಪಾಲ್ ಸಿಂಗ್ 19, ಅಮ್ಜೋತ್ ಸಿಂಗ್ 13, ಕನ್ವರ್ ಗುರ್ಬಾಲ್ ಸಿಂಗ್ ಸಂಧು 12 ಪಾಯಿಂಟ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT