ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ ಜೂನಿಯರ್ ಈಜು: ದರ್ಶನ್, ಹಷಿಕಾ ಪ್ರಥಮ

Published 6 ಜುಲೈ 2024, 0:18 IST
Last Updated 6 ಜುಲೈ 2024, 0:18 IST
ಅಕ್ಷರ ಗಾತ್ರ

ಬೆಂಗಳೂರು: ಬಸವನಗುಡಿ ಈಜುಕೇಂದ್ರದ ಎಸ್‌. ದರ್ಶನ್ ಅವರು ಎನ್‌.ಆರ್‌.ಜೆ ರಾಜ್ಯ ಸಬ್‌ ಜೂನಿಯರ್ ಮತ್ತು ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಡಬಲ್ ಸಾಧನೆ ಮಾಡಿದರು. 

ಬಸವನಗುಡಿ ಈಜು ಕೇಂದ್ರದಲ್ಲಿ ಶುಕ್ರವಾರ ನಡೆದ ಬಾಲಕರ 1500 ಮೀ ಫ್ರೀಸ್ಟೈಲ್ ಮತ್ತು 16–17 ವರ್ಷದೊಳಗಿನವರ 200 ಮೀ ಫ್ರೀಸ್ಟೈಲ್ ನಲ್ಲಿ ದರ್ಶನ್ ಪ್ರಥಮ ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಹಷಿಕಾ ರಾಮಚಂದ್ರ ಚಿನ್ನ ಗೆದ್ದರು.

ಫಲಿತಾಂಶಗಳು

1500 ಮೀ ಫ್ರೀಸ್ಟೈಲ್: ಬಾಲಕರು: 1500 ಮೀ. ಫ್ರೀಸ್ಟೈಲ್: ಎಸ್‌ ದರ್ಶನ್ (ಬಸವನಗುಡಿ ಈಜುಕೇಂದ್ರ; ಕಾಲ: 16ನಿ,29.49ಸೆ)–1, ಎಸ್‌ ದಕ್ಷಣ್ (ಬಸವನಗುಡಿ ಈಜುಕೇಂದ್ರ)–2, ಅನಿಕೇತ್ ಭಟ್ (ಡಾಲ್ಫಿನ್ ಅಕ್ವೆಟಿಕ್ಸ್)–3.

15 ವರ್ಷದೊಳಗಿನವರು: 1500 ಮೀ ಫ್ರೀಸ್ಟೈಲ್: ಪಿ.ವಿ. ಮೊನಿಷ್ ( 17ನಿ,06.77ಸೆ)–1, ಪೃಥ್ವಿರಾಜ್ ಮೆನನ್ –2, ಆರ್ಯನ್ ಮನೀಷ್ –3 (ಮೂವರು ಬಿಎಸಿ). 

16–17 ವರ್ಷದೊಳಗಿನವರ 200 ಮೀ ಫ್ರೀಸ್ಟೈಲ್: ಎಸ್. ದರ್ಶನ್ (ಬಿಎಸಿ; 1ನಿ,56.91ಸೆ)–1, ಆರ್ಯನ್ ಭಟ್ –2, ಅಲೆಸ್ಟರ್ ಸ್ಯಾಮುಯೆಲ್ ರೆಗೊ –3 (ಇಬ್ಬರೂ ಡಾಲ್ಫಿನ್ ಸೆಂಟರ್).

100 ಮೀ ಬ್ರೆಸ್ಟ್‌ಸ್ಟ್ರೋಕ್: ಕ್ರಿಷ್ ಸುಕುಮಾರ್ (ಡಾಲ್ಫಿನ್; 1ನಿ,07.94ಸೆ)–1, ಸೂರ್ಯ ಜಯೋಯಪ್ಪ (ಬಿಎಸಿ)–2, ವೈಶಾಜ್ಙ ಶರವಣನ್ (ಬಿಎಸಿ)–3.

100 ಮೀ ಬ್ಯಾಕ್‌ಸ್ಟ್ರೋಕ್: ಅಮನ್ ಅಭಿಜಿತ್ ಸುಣಗಾರ (ಡಾಲ್ಫಿನ್ ಅಕ್ವೆಟಿಕ್ಸ್; 1ನಿ.00.15ಸೆ)–1, ರಾಘವ ಸ್ವಚಂದಮ್ (ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್)–2, ಸೂರ್ಯ ಜೆ.ಟಿ (ಬಿಎಸಿ)–3.

15 ವರ್ಷದವರ 200 ಮೀ ಫ್ರೀಸ್ಟೈಲ್: ಪಿ.ವಿ. ಮೊನಿಷ್ (ಬಿಎಸಿ; 2ನಿ,04.73ಸೆ)–1, ಅಭಿಮನ್ಯು ನಂಬಿಯಾರ್ (ಡಾಲ್ಫಿನ್)–2, ಜೆ. ನಿಶಾಂತ್ (ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್)–3. 

50 ಮೀ ಬಟರ್‌ಫ್ಲೈ: ಹರಿಕಾರ್ತಿಕ್ ವೇಲು (ಗೋಲ್ಡನ್ ಫಿನ್ಸ್ ಸ್ಪೋರ್ಟ್ಸ್ ಕ್ಲಬ್; 26.51ಸೆ)–1, ಅನೀಶ್ ಅನಿರು್ಧ ಕೋರೆ (ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್)–2, ದಕ್ಷ್ ಮೆಟಾ (ಬಿಎಸಿ)–3.

11 ವರ್ಷದೊಳಗಿನವರು: 200 ಮೀ. ಫ್ರೀಸ್ಟೈಲ್: ಎನ್‌. ಪವನ್‌ ಕೃಷ್ಣ (ಬಿಎಸಿ; 2ನಿ,24.47ಸೆ)–1, ಲೋಹಿತಾಶ್ವ ನಾಗೇಶ್ ಎಸ್‌ (ಗ್ಲೋಬಲ್)–2, ಸುಜಿತ್ ಕಾರ್ತಿಕ್ (ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್) –3. 50 ಮೀ ಬಟರ್‌ಫ್ಲೈ: ಅಮಿತ್ ಪವನ್ ಎಚ್ (ಜೆ ಐಆರ್‌ಎಸ್; 31.19ಸೆ)–1, ರಕ್ಷಿತ್ ಎ ಕೊರೆ (ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್)–2, ಆರಿತ್ ಚಂದ್ರಶೇಖರ (ಮತ್ಸ್ಯಾ)–3. 

10 ವರ್ಷದೊಳಗಿನವರು: 100 ಮೀ ಬ್ಯಾಕ್‌ಸ್ಟ್ರೋಕ್: ಮೊಹಮ್ಮದ್ ಝೈದ್ (ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್; 1ನಿ,26.17ಸೆ)–1, ಇಂದ್ರದತ್ ಎನ್.ಆರ್ (ಪಿ.ಎಂ. ಸ್ವಿಮಿಂಗ್ ಸೆಂಟರ್)–2, ಅದ್ರಿತ್ ಎ ಶಾಂಡಿಲ್ಯಾ (ಡಾಲ್ಫಿನ್ ಅಕ್ವೆಟಿಕ್ಸ್)–3. 

10 ವರ್ಷದವರು: 200 ಮೀ ಫ್ರೀಸ್ಟೈಲ್: ಎಸ್. ಋತ್ವಾ (ಡಾಲ್ಫಿನ್; 2ನಿ,34.47ಸೆ)–1, ಅವೀಕ್ ನಮಿತ್ ಗೌಡ (ಮತ್ಸ್ಯಾ)–2, ಲೋಕೇಂದ್ರ ದಮೈ (ಪೂಜಾ ಅಕ್ವೆಟಿಕ್ ಸೆಂಟರ್)–3.

100 ಮೀ ಬ್ರೆಸ್ಟ್‌ಸ್ಟ್ರೋಕ್: ಶಿವಕುಮಾರ್ ರಿತಾನ್ಯಾ (ಬಿಎಸಿ; 1ನಿ.40.59ಸೆ)–1, ಸಿದ್ಧಿ ಶೆಟ್ಟಿ (ಡಾಲ್ಫಿನ್)–2, 

10–11 ವರ್ಷದವರು: 4X50 ಮೀ ಫ್ರೀಸ್ಟೈಲ್ ರಿಲೆ: ಡಾಲ್ಫಿನ್ ಅಕ್ವೆಟಿಕ್ಸ್ (2ನಿ.14.18ಸೆ)–1, ಬಸವನಗುಡಿ ಅಕ್ವೆಟಿಕ್ ಸೆಂಟರ್–2, ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್ –3. 

ಬಾಲಕಿಯರು

16 –17 ವರ್ಷದವರು: 1500 ಮೀ ಫ್ರೀಸ್ಟೈಲ್: ಅದಿತಿ ಎನ್ ಮೂಲ್ಯಾ (ಕಾಲ; 17ನಿ,55.29ಸೆ) –1, ಶಿರಿನ್ –2, ಬಿ.ಎಸ್. ಜನ್ಯಾ –3 (ಮೂವರೂ ಬಿಸಿಎ). 

15 ವರ್ಷದೊಳಗಿನವರು: 1500 ಮೀ ಫ್ರೀಸ್ಟೈಲ್: ಶ್ರೀಚರಣಿ ತುಮು (ಗ್ಲೋಬಲ್ ಈಜುಕೇಂದ್ರ; ನೂತನ ದಾಖಲೆ: 18ನಿ,9.54ಸೆ. ಹಳೆಯದು: 18ನಿ,11.69ಸೆ, 2023ರಲ್ಲಿ ಶಿರಿನ್ ದಾಖಲಿಸಿದ್ದರು)–1, ಮೀನಾಕ್ಷಿ ಮೆನನ್ –2, ತನಿಷಾ ವಿನಯ್ –3 (ಇಬ್ಬರೂ ಬಿಎಸಿ). 

11 ವರ್ಷದೊಳಗಿನವರು: 200 ಮೀ. ಫ್ರೀಸ್ಟೈಲ್: ಸ್ತುತಿ ಸಿಂಗ್ (ಬೆಂಗಳೂರು ಈಜು ಅಕಾಡೆಮಿ; 2ನಿ,35.48ಸೆ)–1, ನಯನಾ ಎ ಮಧ್ಯಸ್ಥ (ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್)–2, ಪಿ.ವಿ. ಶರಣ್ಯಾ (ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್)–3.

 10 ವರ್ಷದೊಳಗಿನವರು: 200 ಮೀ ಫ್ರೀಸ್ಟೈಲ್: ಝರನಾ ಸಿಸೊಡಿಯಾ (ಏಕಲವ್ಯ ಸ್ಪೋರ್ಟ್ಸ್; 2ನಿ,44.13ಸೆ)–1, ಆರ್. ಸಾನ್ವಿ (ಡಾಲ್ಫಿನ್)–2, ಸುದೀಪ್ತಿ ಸುನಿಲ್ (ಡಾಲ್ಫಿನ್)–3. 

11 ವರ್ಷದೊಳಗಿನವರ 200 ಮೀ ಫ್ರೀಸ್ಟೈಲ್: ಹಷಿಕಾ ರಾಮಚಂದ್ರ (ಸಮಯ; 2ನಿ.09.28ಸೆ)–1, ಶಿರಿನ್ –2, ನಯನಾ ವಿಹಿತ –3 (ಮೂವರು ಬಿಎಸಿಯವರು).

11 ವರ್ಷದೊಳಗಿನ 100 ಮೀ ಬ್ಯಾಕ್‌ಸ್ಟ್ರೋಕ್: ಶ್ರೇಯಾ ಸುರೇಶ್ ಪೂಜಾರ್ (ಬೆಂಗಳೂರು ಈಜು ಅಕಾಡೆಮಿ; 1ನಿ,28.35ಸೆ)–1, ಆರಾಧ್ಯ ಆಚಾರ್ (ಮಂಗಳಾ ಸ್ವಿಮಿಂಗ್ ಕ್ಲಬ್)–2, ರಿಧಿ ಮಹೇಶ್ವರಿ (ಪಿ.ಎಂ. ಸ್ವಿಮಿಂಗ್ ಸೆಂಟರ್)–3. 

15 ವರ್ಷದೊಳಗಿನವರ 200 ಮೀ. ಫ್ರೀಸ್ಟೈಲ್: ಶ್ರೀಚಾರಣಿ ತುಮು (ಗ್ಲೋಬಲ್; 2ನಿ,11.75ಸೆ)–1, ಸುಹಾಸಿನಿ ಘೋಷ್ (ಡಾಲ್ಫಿನ್)–2, ಪ್ರತಿಷ್ಟಾ ಕಮಲೇಶ್ (ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್)–3. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT