ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಡಾಡ್ಜ್‌ಬಾಲ್: ಕರ್ನಾಟಕದ ಸಬ್‌ ಜೂನಿಯರ್‌ ತಂಡಗಳಿಗೆ ಪ್ರಶಸ್ತಿ

Published 9 ಜನವರಿ 2024, 15:46 IST
Last Updated 9 ಜನವರಿ 2024, 15:46 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಸಬ್ ಜೂನಿಯರ್ ಬಾಲಕರ ಮತ್ತು ಬಾಲಕಿಯರ ತಂಡಗಳು ಹರಿಯಾಣದಲ್ಲಿ ನಡೆದ 2ನೇ ಜೂನಿಯರ್ ಮತ್ತು ಸಬ್ ಜೂನಿಯರ್ ರಾಷ್ಟ್ರೀಯ ಡಾಡ್ಜ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವು.

ಸಬ್ ಜೂನಿಯರ್ ಬಾಲಕರ ವಿಭಾಗದ ಫೈನಲ್‌ನಲ್ಲಿ ಕರ್ನಾಟಕ ತಂಡವು 4–3ರಿಂದ ಆತಿಥೇಯ ಹರಿಯಾಣ ತಂಡವನ್ನು ಮಣಿಸಿತು. ಸೆಮಿಫೈನಲ್‌ನಲ್ಲಿ ಕರ್ನಾಟಕ 5–2ರಿಂದ ಮಹಾರಾಷ್ಟ್ರ ತಂಡವನ್ನು ಮಣಿಸಿತ್ತು. ಈ ಪಂದ್ಯಗಳಲ್ಲಿ ಕರ್ನಾಟಕ ತಂಡದ ನಾಯಕ ಭರತ್‌ ವಿ.ಬಿ, ಸಮರ್ಥ್‌, ಪಿ. ಕಾರ್ತಿಕ್‌ ಮಿಂಚಿದರು.

ಸಬ್‌ ಜೂನಿಯರ್‌ ಬಾಲಕಿಯರ ವಿಭಾಗದಲ್ಲಿ ಕರ್ನಾಟಕವು ಫೈನಲ್‌ನಲ್ಲಿ 3–2ರಿಂದ ಪಂಜಾಬ್‌ ತಂಡವನ್ನು ಮಣಿಸಿತು. ನಾಯಕಿ ವರ್ಷಾರಾಜ್‌ ಮತ್ತು ದೀಪಿಕಾ ಆಟ ಗಮನ ಸೆಳೆಯಿತು.

ಜೂನಿಯರ್‌ ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡವು ರನ್ನರ್‌ ಅಪ್‌ ಸ್ಥಾನ ಪಡೆಯಿತು. ಸೆಮಿಫೈನಲ್‌ನಲ್ಲಿ ಮಹಾರಾಷ್ಟ್ರವನ್ನು 2–1ರಿಂದ ಮಣಿಸಿದ್ದ ಕರ್ನಾಟಕ, ಫೈನಲ್‌ನಲ್ಲಿ ಗುಜರಾತ್‌ಗೆ 1–2ರಿಂದ ಪರಾಭವಗೊಂಡಿತು. ಜೂನಿಯರ್‌ ಬಾಲಕರ ವಿಭಾಗದ ರಾಜ್ಯ ತಂಡವು ಟೂರ್ನಿಯಲ್ಲಿ ಚತುರ್ಥ ಸ್ಥಾನ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT