ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಕ್ರೀಡಾಕೂಟ: ಬಹುಮಾನ ಹೆಚ್ಚಳಕ್ಕೆ ರಿತು ನೇಗಿ ಒತ್ತಾಯ

Published 16 ಅಕ್ಟೋಬರ್ 2023, 20:06 IST
Last Updated 16 ಅಕ್ಟೋಬರ್ 2023, 20:06 IST
ಅಕ್ಷರ ಗಾತ್ರ

ಶಿಮ್ಲಾ: ಏಷ್ಯನ್ ಕ್ರೀಡಾಕೂಟದ ಪದಕ ವಿಜೇತರಿಗೆ ನಗದು ಬಹುಮಾನವನ್ನು ಹೆಚ್ಚಿಸುವಂತೆ ಭಾರತ  ಮಹಿಳಾ ಕಬಡ್ಡಿ ತಂಡದ ನಾಯಕಿ ರಿತು ನೇಗಿ ಅವರು ಹಿಮಾಚಲ ಪ್ರದೇಶ ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ಚಿನ್ನದ ಪದಕ ಗೆದ್ದ ತನ್ನ ರಾಜ್ಯದ ಕ್ರೀಡಾಪಟುಗಳಿಗೆ ಹರಿಯಾಣ ಮತ್ತು ಮಹಾರಾಷ್ಟ್ರ ಸರ್ಕಾರಗಳು ₹3 ಕೋಟಿ ಬಹುಮಾನ ನೀಡುತ್ತಿದೆ. ರಾಜಸ್ಥಾನ ಸರ್ಕಾರ ₹1 ಕೋಟಿ ನೀಡುತ್ತಿದೆ. ಆದರೆ, ಹಿಮಾಚಲ ಪ್ರದೇಶ ಸರ್ಕಾರ ಕೇವಲ ₹15 ಲಕ್ಷ ನೀಡುತ್ತಿದ್ದು, ಅದನ್ನು ಹೆಚ್ಚಳ ಮಾಡಬೇಕು’ ಎಂದು ಮನವಿ ಮಾಡಿದ್ದಾರೆ.

‘ಸದ್ಯ ನಾನು ರೈಲ್ವೆಯಲ್ಲಿ ಉದ್ಯೋಗ ಮಾಡುತ್ತಿದ್ದೇನೆ. ತಂಡದ ಇಬ್ಬರು ಆಟಗಾರ್ತಿಯರು ರಾಜಸ್ತಾನ ಪೊಲೀಸ್‌ ಸೇವೆಯಲ್ಲಿದ್ದಾರೆ. ಹಿಮಾಚಲ ಪ್ರದೇಶ ಸರ್ಕಾರವು ಉತ್ತಮ ಉದ್ಯೋಗ ನೀಡಿದರೆ ತವರು ರಾಜ್ಯದಲ್ಲಿ ಕೆಲಸ ಮಾಡಲು ಸಿದ್ಧರಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಚೀನಾದ ಹಾಂಗ್‌ಝೌನಲ್ಲಿ ಈಚೆಗೆ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ ತಂಡ ಚಿನ್ನದ ಪದಕ ಜಯಿಸಿತ್ತು. 

ಸನ್ಮಾನ: ಇದೇ ವೇಳೆ ರಿತು ನೇಗಿ ಸೇರಿದಂತೆ ಕಬಡ್ಡಿ ತಂಡದ ಸಹ ಆಟಗಾರ್ತಿಯರಾದ ನಿಧಿ ಶರ್ಮಾ, ಪುಷ್ಪಾ ರಾಣಾ, ಸುಷ್ಮಾ ಶರ್ಮಾ ಹಾಗೂ ಪುರುಷರ ಕಬಡ್ಡಿ ತಂಡದ ವಿಶಾಲ್‌ ಭಾರದ್ವಾಜ್‌ ಅವರನ್ನು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT