ಪುರುಷರ 49 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಧನುಷ್ ಒಟ್ಟು 200 ಕೆ.ಜಿ (88+ 112) ಭಾರ ಎತ್ತುವ ಮೂಲಕ ಮೂರನೇ ಸ್ಥಾನ ಪಡೆದರು. 16 ವರ್ಷದ ಅವರು ಸ್ನ್ಯಾಚ್ನಲ್ಲಿ ಬೆಳ್ಳಿ ಗೆದ್ದರು. ಫಿಲಿಪ್ಪೀನ್ಸ್ನ ಪ್ರಿನ್ಸ್ ಕೆ. ಡೆಲೊಸ್ ಸಂಟೊಸ್ ಮತ್ತು ಎರೊನ್ ಬೊರೆಸ್ ಅವರು ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಗೆದ್ದುಕೊಂಡರು.