ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂತೀಯ ಬಲರೇಖೆಗಳು

ಮಾಡಿ ನಲಿ ಸರಣಿ –80
Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೇಕಾಗುವ ಸಲಕರಣೆಗಳು: ಒಂದು A4 ಆಳತೆಯ ಪೇಪರ್‌, ಕಂಬಿ ಕಾಂತ, ಕಬ್ಬಿಣದ ಪುಡಿ

ವಿಧಾನ: ಚಿತ್ರದಲ್ಲಿ: 1) ಒಂದು ಕಂಬಿಕಾಂತವನ್ನು A4 ಅಳತೆಯ ಕಾಗದದ ಕೆಳಗಡೆ ಹಾಗೂ ಮಧ್ಯದಲ್ಲಿಡಿ. 2) ಅನಂತರ ಕಬ್ಬಿಣದ ಪುಡಿಯನ್ನು, ಅಯಸ್ಕಾಂತದ ಸುತ್ತಲೂ ಕಾಗದದ ಮೇಲೆ ತುಂತುರಿಸಿರಿ.

ಪ್ರಶ್ನೆ: ಕಬ್ಬಿಣದ ಪುಡಿ ಅಯಸ್ಕಾಂತದ ಸುತ್ತಲೂ ಯಾವ ರೀತಿ ಕಾಣುತ್ತದೆ ಏಕೆ?

ಉತ್ತರ: ಚಿತ್ರದಲ್ಲಿ ತೋರಿಸಿದಂತೆ ಕಬ್ಬಿಣದ ಪುಡಿ ಅಯಸ್ಕಾಂತದ ಉತ್ತರ ಧ್ರುವದಿಂದ ದಕ್ಷಿಣ ಧ್ರುವದ ಕಡೆಗೆ ಕಾಲ್ಪನಿಕ ರೇಖೆಗಳಲ್ಲಿ ಹರಡುತ್ತದೆ. ಅಯಸ್ಕಾಂತದ ಸುತ್ತಲೂ ವ್ಯಾಪಿಸಿರುವ, ಕಾಲ್ಪನಿಕ ರೇಖೆಗಳಿಗೆ ಕಾಂತೀಯ ಬಲರೇಖೆಗಳೆಂದು ಕರೆಯುತ್ತಾರೆ.

ಅಯಸ್ಕಾಂತದ ಸುತ್ತಲಿರುವ ಹಾಗೂ ಅದು ಬೀರುವ ಪ್ರಭಾವಕ್ಕೆ ಕಾಂತಕ್ಷೇತ್ರವೆಂದು ಕರೆಯುತ್ತಾರೆ. ಭೂಮಿಯೂ ಕೂಡ ಒಂದು ಕಾಂತ. ಅದಕ್ಕೂ ಕೂಡ ಉತ್ತರ ಮತ್ತು ದಕ್ಷಿಣ ಧ್ರುವಗಳಿವೆ. ಆದ್ದರಿಂದ ಕಂಪಾಸನ್ನು ನೀವು ಯಾವ ದಿಕ್ಕಿನಲ್ಲಿಟ್ಟರೂ ಅದು ದಕ್ಷಿಣೋತ್ತರವಾಗಿ ನಿಲ್ಲುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT