ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ ಉತ್ತರ

Last Updated 29 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಪುಷ್ಪ ಸಿ.
ಬಿ.ಇ. (ಇ.ಸಿ.ಇ.) ಓದಿದವರು ಎಂ.ಎಸ್ಸಿ ಭೌತಶಾಸ್ತ್ರ ಓದಲು ಸಾಧ್ಯವೇ?

–ಬಿ.ಇ ಪದವಿಯ ನಂತರ ಭೌತಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿಗೆ ಪ್ರವೇಶ ಪಡೆಯಲು ಸಾಧ್ಯವಿಲ್ಲ. ಈ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ಕನಿಷ್ಠ ಅರ್ಹತೆ ಎಂದರೆ ಬಿ.ಎಸ್ಸಿ.ಯಲ್ಲಿ ಒಂದು ವಿಷಯವಾಗಿ ಭೌತಶಾಸ್ತ್ರ ಅಭ್ಯಾಸ ಮಾಡಿರಬೇಕು.

ಸ್ಮಿತಾ ಎಸ್.
ನಾನು ೨೦೦೮ ರಲ್ಲಿ ೫೯% ರೊಂದಿಗೆ ಬಿ.ಎಸ್ಸಿ (FCM- Food Science, Chemistry and Microbiology) ಮುಗಿಸಿದೆ. ಕಾರಣಾಂತರಗಳಿಂದ ಮುಂದೆ ಓದಲಾಗಲಿಲ್ಲ. ಈಗ ಕಂಪ್ಯೂಟರ್ ತರಬೇತಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದೇನೆ. ಇನ್ನು ದೂರಶಿಕ್ಷಣದ ಮೂಲಕ ಎಂ.ಎಸ್ಸಿ (ಮೈಕ್ರೋಬಯಾಲಜಿ) ಮಾಡಬೇಕೆಂದುಕೊಂಡಿದ್ದೇನೆ. ಇದು ಸೂಕ್ತವೇ? ದೂರಶಿಕ್ಷಣದಲ್ಲಿ ಮಾಡಿದರೆ ಮಾನ್ಯತೆ ಇರುತ್ತದೆಯೇ?

–ನಿಮ್ಮ ಬಯಕೆಯಂತೆ ದೂರ ಶಿಕ್ಷಣದಲ್ಲಿ ಎಂ.ಎಸ್ಸಿ ಪದವಿ ಅಭ್ಯಾಸ ಮಾಡಲು ಸಾಧ್ಯ. ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದ ಯಾವುದೇ ಪದವಿಗೆ ಉದ್ಯೋಗ ಮತ್ತು ಇತರೆ ವಿಚಾರಗಳಲ್ಲಿ ಮಾನ್ಯತೆ ಇರುತ್ತದೆ. ಆದ್ದರಿಂದ ನೀವು ಈ ಪದವಿಯನ್ನು ದೂರ ಶಿಕ್ಷಣದ ಮೂಲಕ ಪಡೆಯುವುದು ಸೂಕ್ತ.

ಅಶ್ವಿನಿ ಬಾದಾಮಿ
ನಾನು ದ್ವಿತೀಯ ಪಿ.ಯು.ಸಿ, ಪಿ.ಸಿ.ಎಂ.ಬಿ ಓದುತ್ತಿದ್ದೇನೆ. ಮುಂದೆ ಬಿ.ವಿ.ಎಸ್ಸಿ ಓದಲು ಬಯಸಿದ್ದೇನೆ. ಇದಕ್ಕೆ ಏನು ಮಾಡಬೇಕು? ಪ್ರವೇಶ ಪರೀಕ್ಷೆ ಇರುತ್ತದೆಯೇ? ತಯಾರಿ ಹೇಗೆ?

–ಪಶು ವೈದ್ಯಕೀಯ ವಿಜ್ಞಾನದಲ್ಲಿ ಪ್ರವೇಶ ಪಡೆಯಲು ನೀವು ಕರ್ನಾಟಕ ಶಿಕ್ಷಣ ಪ್ರಾಧಿಕಾರವು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಬರೆಯಬೇಕು. ಈ ಪರೀಕ್ಷೆಯಲ್ಲಿ ಗಳಿಸುವ ಮತ್ತು ಪದವಿ ಪೂರ್ವ ಶಿಕ್ಷಣ ಮಂಡಳಿಯ ವಾರ್ಷಿಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಸಿಗುವ ಜೇಷ್ಠತಾ ಪಟ್ಟಿಗೆ ಅನುಗುಣವಾಗಿ ಪ್ರವೇಶ ದೊರೆಯುತ್ತದೆ.


ಸಲ್ಮಾನ್ ಹುಕ್ಕೇರಿ
ನಾನು ಅಂತಿಮ ವರ್ಷದ ಬಿ.ಎ ಓದುತ್ತಿದ್ದೇನೆ. ಮುಂದೆ ಎಂ.ಬಿ.ಎ ಮಾಡಬೇಕೆಂದಿದ್ದೇನೆ. ಇದಕ್ಕೆ ಯಾವ ವಿಷಯ ಸೂಕ್ತ? ಯಾವ ವಿಶ್ವವಿದ್ಯಾಲಯ ಸೂಕ್ತ? ಪ್ರವೇಶ ಹೇಗೆ? 

-–ಎಂ.ಬಿ.ಎ ಪದವಿಗೆ ಸೂಕ್ತವಾದ ವಿಷಯ, ಇದು ನಿಮ್ಮ  ಆಸಕ್ತಿಯನ್ನು ಅವಲಂಬಿಸಿರುತ್ತದೆ. ಆದ್ದರಿಂದ ಮೊದಲು ಎಂ.ಬಿ.ಎ ಪದವಿಯಲ್ಲಿ ದೊರೆಯುವ ವಿಷಯಗಳ ಮಾಹಿತಿ ಪಡೆದು, ನಿಮ್ಮ ಆಸಕ್ತಿಗೆ  ಅನುಗುಣವಾದ ಆಯ್ಕೆಯನ್ನು ಮಾಡಿಕೊಳ್ಳು­ವುದು ಸೂಕ್ತ. ಈ ಪದವಿಗೆ ನೀವು ಐ.ಐ.ಎಂ, ವಿ.ಟಿ.ಯು ತಾಂತ್ರಿಕ ವಿಶ್ವವಿದ್ಯಾಲಯ ಅಥವಾ ಬೇರೆ ಯಾವುದೇ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕೆ ಪೂರ್ವಭಾವಿ ಸಿದ್ಧತೆಗಾಗಿ ನೀವು ಬರೆಯಬೇಕಾದ ಪ್ರವೇಶ ಪರೀಕ್ಷೆ ಮತ್ತು ಅದಕ್ಕೆ ಬೇಕಾದ ತಯಾರಿಯನ್ನು ಈಗಿನಿಂದಲೇ ಮಾಡಿಕೊಳ್ಳಬಹುದು.

ಕಿರಣ್
ಬಿ.ಇ. ಸಿವಿಲ್ ಮುಗಿಸಿ ಖಾಸಗಿ ಕಂಪೆನಿಯಲ್ಲಿ ಕೆಲಸದಲ್ಲಿದ್ದೇನೆ. ನನ್ನ ಉದ್ಯೋಗ ಅನುಭವದ ಆಧಾರದ ಮೇಲೆ ಹೊರದೇಶದಲ್ಲಿ ಇನ್ನು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕೆಂದಿದ್ದೇನೆ. ಇದಕ್ಕೆ ಏನು ಮಾಡಬೇಕು? ಈ ರೀತಿ ಬೋಧಿಸುವ ವಿಶ್ವವಿದ್ಯಾಲಯಗಳು ಯಾವವು ಎಂಬುದನ್ನು ದಯಮಾಡಿ ತಿಳಿಸಿ. ನಮ್ಮ ಆರ್ಥಿಕ ಸ್ಥಿತಿಯೂ ಸರಿ ಇಲ್ಲ. ಹೇಗಾದರೂ ಮಾಡಿ ಹೆಚ್ಚಿನದನ್ನು ಪಡೆಯಬೇಕೆಂಬ ಆಸೆ ಇದೆ. ದಯಮಾಡಿ ಸೂಕ್ತ ಸಲಹೆ ನೀಡಿ.

– ಹೊರದೇಶದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಇಚ್ಛೆ ಇದ್ದರೆ ಅದಕ್ಕೆ ಪೂರಕವಾಗಿ ಎರಡು ಪ್ರವೇಶ ಪರೀಕ್ಷೆಗಳಾದ ಜಿ.ಆರ್.ಇ ಮತ್ತು ಟೋಫೆಲ್ ಇವುಗಳನ್ನು ತೆಗೆದುಕೊಳ್ಳ­ಬೇಕು. ಈ ಪರೀಕ್ಷೆಗಳಲ್ಲಿ ನೀವು ಗಳಿಸುವ ಅಂಕಗಳು ಮತ್ತು ನಿಮ್ಮ ಉದ್ಯೋಗದ ಅನುಭವದ ಆಧಾರದ ಮೇಲೆ, ಪ್ರವೇಶ ದೊರೆಯುವ ವಿಶ್ವವಿದ್ಯಾಲಯವನ್ನು ಆದ್ಯತೆಯ ಮೇಲೆ ಅಮೆರಿಕ ದೇಶದಲ್ಲಿ ಆರಿಸಿಕೊಳ್ಳಬಹುದು. ಆರ್ಥಿಕ ತೊಂದರೆ ಇದ್ದರೆ ಉನ್ನತ ವ್ಯಾಸಾಂಗಕ್ಕೆ ಅನೇಕ ಬ್ಯಾಂಕ್‌ಗಳಲ್ಲಿ ಸಾಲದ ಸೌಲಭ್ಯ ಇರುತ್ತದೆ. ನಿಮ್ಮ ವಿದ್ಯಾಭ್ಯಾಸದ ನಂತರ ಉದ್ಯೋಗವನ್ನು ಗಳಿಸಿ ಈ ಸಾಲವನ್ನು ತೀರಿಸಲು ಸಾಧ್ಯ.

ಪ್ರಶ್ನೆ ಕ್ಪಯಬಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, 75 ಎಂ.ಜಿ. ರಸ್ತೆ,ಬೆಂಗಳೂರು 560 001

ಇಮೇಲ್: shikshana@prajavani.co.in 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT