ಬುಧವಾರ, ಡಿಸೆಂಬರ್ 2, 2020
19 °C

ಸೌದಿ ಗಾಲ್ಫ್‌: ಅದಿತಿ ಉತ್ತಮ ಸಾಧನೆ

ಪಿಟಿಐ Updated:

ಅಕ್ಷರ ಗಾತ್ರ : | |

ಅದಿತಿ ಅಶೋಕ್

ಕೀಸ್‌, ಸೌದಿ ಅರೇಬಿಯಾ: ಭಾರತದ ಅದಿತಿ ಅಶೋಕ್‌ ಇಲ್ಲಿ ನಡೆಯುತ್ತಿರುವ ಆರಾಮ್ಕೊ ಸೌದಿ ಲೇಡೀಸ್‌ ಅಂತರರಾಷ್ಟ್ರೀಯ ಗಾಲ್ಫ್‌ ಟೂರ್ನಿಯ ಮೊದಲ ದಿನ ಉತ್ತಮ ಸಾಮರ್ಥ್ಯ ತೋರಿದ್ದಾರೆ. ದಿನದ ಅಂತ್ಯಕ್ಕೆ ಅವರು ಜಂಟಿ 31ನೇ ಸ್ಥಾನ ಗಳಿಸಿದ್ದಾರೆ.

ಆದರೆ ತ್ವೇಸಾ ಮಲಿಕ್ ಜಂಟಿ 55ನೇ ಸ್ಥಾನದಲ್ಲಿ ಉಳಿದು ನಿರಾಸೆ ಅನುಭವಿಸಿದರು. ದೀಕ್ಷಾ ದಾಗರ್‌ ಹಾಗೂ ಆಸ್ತಾ ಮದನ್‌ 86ನೇ ಸ್ಥಾನ ಗಳಿಸಿದರು. 

ಇಂಗ್ಲೆಂಡ್‌ನ ಜಾರ್ಜಿಯಾ ಹಾಲ್ ಅವರು ವೇಲ್ಸ್‌ನ ಲಿಡಿಯಾ ಹಾಲ್ ವಿರುದ್ಧ ಮೊದಲ ಸುತ್ತಿನಲ್ಲಿ ಮುನ್ನಡೆ ಗಳಿಸಿದ್ದಾರೆ. ಜಾರ್ಜಿಯಾ 2018ರ ಮಹಿಳೆಯರ ಬ್ರಿಟಿಷ್ ಓಪನ್‌ ಟೂರ್ನಿಯ ಪ್ರಶಸ್ತಿ ಗಳಿಸಿದ್ದರು. ಉರ್ಸುಲಾ ವಿಕ್‌ಸ್ಟ್ರೋಮ್ ಮತ್ತು ಎಮಿಲಿ ಕ್ರಿಸ್ಟಿನ್ ಪೆಡೆರ್ಸನ್ ಜಂಟಿ ಮೂರನೇ ಸ್ಥಾನ ಗಳಿಸಿದ್ದಾರೆ. ಲಿಂಡಾ ವೆಸ್‌ಬರ್ಗ್‌, ನೊಬೂಲ್ ಡ್ಲಾಮಿನಿ ಮತ್ತು ಟೋನಿ ಡಫಿನ್‌ರೂಡ್ ಜೊತೆಯಾಗಿ ಐದನೇ ಸ್ಥಾನದಲ್ಲಿದ್ದಾರೆ. ಇದು ಒಟ್ಟು ₹ 8.50 ಕೋಟಿ ಬಹುಮಾನ್ ಮೊತ್ತ ಇರುವ ಟೂರ್ನಿಯಾಗಿದೆ. ದುಬೈನಲ್ಲಿ ಕಳೆದ ವಾರ ನಡೆದ ಟೂರ್ನಿಯಲ್ಲಿ ಅದಿತಿ ಆರನೇ ಸ್ಥಾನ ಗಳಿಸಿದ್ದರೆ, ತ್ವೇಸಾ 27ನೇ ಸ್ಥಾನ ಗಳಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು