ಬುಧವಾರ, ಮಾರ್ಚ್ 22, 2023
19 °C

ಒಲಿಂಪಿಕ್ಸ್‌: 26 ಮಂದಿಯ ತಂಡ ಪ್ರಕಟಿಸಿದ ಎಎಫ್‌ಐ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸ್ಪ್ರಿಂಟರ್ ದ್ಯುತಿ ಚಾಂದ್ ಒಳಗೊಂಡಂತೆ ಟೋಕಿಯೊ ಒಲಿಂ‍ಪಿಕ್ಸ್‌ಗೆ 26 ಮಂದಿ ಕ್ರೀಡಾಪಟುಗಳ ತಂಡವನ್ನು ಭಾರತ ಅಥ್ಲೆಟಿಕ್ ಫೆಡರೇಷನ್ ಸೋಮವಾರ ಪ್ರಕಟಿಸಿದೆ. 

ಮಹಿಳೆಯರ 100 ಮತ್ತು 200 ಮೀಟರ್ಸ್ ಓಟದಲ್ಲಿ ದ್ಯುತಿ ಚಾಂದ್ ಸ್ಪರ್ಧಿಸಲಿದ್ದು ಎಂ.ಪಿ.ಜಬೀರ್ ಪುರುಷರ 400 ಮೀಟರ್ಸ್‌ ಹರ್ಡಲ್ಸ್‌ನಲ್ಲಿ, ಗುರುಪ್ರೀತ್ ಸಿಂಗ್ ಪುರುಷರ 50 ಕಿಮೀ ವೇಗ ನಡಿಗೆಯಲ್ಲಿ ಮತ್ತು ಅನು ರಾಣಿ ಮಹಿಳೆಯರ ಜಾವೆಲಿನ್ ಥ್ರೋದಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರನ್ನು ರ‍್ಯಾಂಕಿಂಗ್‌ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ.

26 ಅಥ್ಲೀಟ್‌ಗಳ ಪೈಕಿ 16 ಮಂದಿ ವೈಯಕ್ತಿಕ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಪುರುಷರ 4x400 ಮೀಟರ್ಸ್ ರಿಲೇಗೆ ಐವರನ್ನು ಮತ್ತು ಮಿಶ್ರ ವಿಭಾಗದ 4x400 ಮೀಟರ್ಸ್ ರಿಲೇಗೆ ಇಬ್ಬರು ಪುರುಷರು ಮತ್ತು ಮೂವರು ಮಹಿಳೆಯರನ್ನು ಆರಿಸಲಾಗಿದೆ. ಮೂವರು ಮಹಿಳಾ ಅಥ್ಲೀಟ್‌ಗಳನ್ನು ಭಾನುವಾರ ಪಟಿಯಾಲದಲ್ಲಿ ನಡೆದ ಟ್ರಯಲ್ಸ್‌ನಲ್ಲಿ ಆಯ್ಕೆ ಮಾಡಲಾಗಿತ್ತು. 

ತಂಡಗಳು: ಪುರುಷರು: ಅವಿನಾಶ್ ಸಬ್ಲೆ (3000 ಮೀ ಸ್ಟೀಪಲ್‌ ಚೇಸ್‌), ಎಂ.ಪಿ.ಜಬೀರ್ (400 ಮೀ ಹರ್ಡಲ್ಸ್‌), ಎಂ.ಶ್ರೀಶಂಕರ್ (ಲಾಂಗ್ ಜಂಪ್‌), ತಜಿಂದರ್ ಪಾಲ್ ಸಿಂಗ್ ತೂರ್ (ಶಾಟ್ ಪಟ್‌), ನೀರಜ್ ಚೋಪ್ರಾ, ಶಿವಪಾಲ್ ಸಿಂಗ್ (ಜಾವೆಲಿನ್ ಥ್ರೋ), ಕೆ.ಟಿ.ಇರ್ಫಾನ್‌, ಸಂದೀಪ್ ಕುಮಾರ್, ರಾಹುಲ್ ರೊಹಿಲ್ಲ (20 ಕಿಮೀ ವೇಗ ನಡಿಗೆ), ಗುರುಪ್ರೀತ್ ಸಿಂಗ್ (50 ಕಿಮೀ ವೇಗ ನಡಿಗೆ), ಅಮೋಜ್ ಜೇಕಬ್‌, ಆರೋಗ್ಯ ರಾಜೀವ್‌, ಮುಹಮ್ಮದ್ ಅನಾಸ್‌, ನಾಗನಾಥನ್ ಪಾಂಡಿ, ನೊಹ್ ನಿರ್ಮಲ್ ಟೋಮ್ (4x400 ರಿಲೇ), ಸಾರ್ಥಕ್ ಭಾಂಬ್ರಿ, ಅಲೆಕ್ಸ್‌ ಆ್ಯಂಟನಿ (4x400 ಮೀ ಮಿಶ್ರ ರಿಲೆ); ಮಹಿಳಾ ವಿಭಾಗ: ದ್ಯುತಿ ಚಾಂದ್‌ (100, 200 ಮೀ ಓಟ), ಕಮಲ್‌ಪ್ರೀತ್‌ ಕೌರ್, ಸೀಮಾ ಅಂಟಿಲ್‌ ಪೂನಿಯಾ (ಡಿಸ್ಕಸ್ ಥ್ರೋ), ಅನು ರಾಣಿ (ಜಾವೆಲಿನ್ ಥ್ರೋ), ಭಾವನಾ ಜತ್‌, ಪ್ರಿಯಾಂಕ ಗೋಸ್ವಾಮಿ (20 ಕಿಮೀ ವೇಗ ನಡಿಗೆ), ರೇವತಿ ವೀರಮಣಿ, ಶುಭಾ ವೆಂಕಟೇಶನ್, ಧನಲಕ್ಷ್ಮಿ ಶೇಖರ್ (4x400 ಮೀ ಮಿಶ್ರ ರಿಲೇ).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು