ಶುಕ್ರವಾರ, ಜೂನ್ 5, 2020
27 °C

ಎಎಫ್‌ಐ ಚುನಾವಣೆ ಮುಂದೂಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ನ (ಎಎಫ್‌ಐ) ಚುನಾವಣೆ ಮುಂದೂಡಿಕೆಯಾಗಿದೆ. ಈಗಿರುವ ಪದಾಧಿಕಾರಿಗಳನ್ನೇ ಮುಂದುವರಿಸಲು ಶನಿವಾರ ನಡೆದ ಮಂಡಳಿಯ ವಿಶೇಷ ಆನ್‌ಲೈನ್‌ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.

ಹಾಲಿ ಅಧ್ಯಕ್ಷ ಆದಿಲ್‌ ಸುಮರಿವಾಲಾ ಅವರು 2016ರ ಏಪ್ರಿಲ್‌ನಲ್ಲಿ ಎರಡನೇ ಅವಧಿಗೆ ಆಯ್ಕೆಯಾಗಿದ್ದರು. ಹೋದ ತಿಂಗಳು ಎಎಫ್‌ಐಗೆ ಚುನಾವಣೆ ನಡೆಯಬೇಕಿತ್ತು. ಆದರೆ ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.

ಮುಂದಿನ ಚುನಾವಣೆ ನಡೆಯುವ ನಿರ್ದಿಷ್ಟ ದಿನಾಂಕವನ್ನು ಶನಿವಾರದ ಸಭೆಯಲ್ಲಿ ಪ್ರಕಟಿಸಿಲ್ಲ. ‘ಎಲ್ಲ ಪದಾಧಿಕಾರಿಗಳ ಮುಖಾಮುಖಿ ಸಭೆ (ಆನ್‌ಲೈನ್‌ ಅಲ್ಲ) ಸಾಧ್ಯವಾದಾಗ ಚುನಾವಣೆ ನಡೆಯಲಿದೆ’ ಎಂದು ಫೆಡರೇಷನ್‌ ತಿಳಿಸಿದೆ.

ಅಧ್ಯಕ್ಷ ಸುಮರಿವಾಲಾ ಅವರು ಹಿರಿಯ ಸಹೊದ್ಯೋಗಿಗಳೊಂದಿಗೆ ಸಮಾಲೋಚಿಸಿ ವಾರ್ಷಿಕ ಸಾಮಾನ್ಯ ಸಭೆ ನಡೆಯುವ ದಿನಾಂಕ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು