ಡಬ್ಲ್ಯುಟಿಟಿ ಕಂಟೆಂಡರ್: ಯಶಸ್ವಿನಿಗೆ ಎರಡು ಪದಕ

ಬೆಂಗಳೂರು: ಕರ್ನಾಟಕದ ಯಶಸ್ವಿನಿ ಅವರು ಹಂಗರಿಯ ಸೊಂಬತ್ಲಿಯಲ್ಲಿ ನಡೆದ ಡಬ್ಲ್ಯುಟಿಟಿ ಕಂಟೆಂಡರ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಎರಡು ಪದಕಗಳನ್ನು ಗೆದ್ದುಕೊಂಡರು. 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಬೆಳ್ಳಿ ಪದಕ ಮತ್ತು 19 ವರ್ಷದೊಳಗಿನವರ ವಿಭಾಗದಲ್ಲಿ ಕಂಚಿನ ಪದಕ ಅವರ ಪಾಲಾಯಿತು.
17 ವರ್ಷದೊಳಗಿನವರ ವಿಭಾಗದ ಫೈನಲ್‌ನಲ್ಲಿ ಯಶಸ್ವಿನಿ ಸಿಂಗಪುರದ ಜಿಂಗಿ ಜೋ ಎದುರು 7-11, 11-8, 10-12, 9-11ರಲ್ಲಿ ಸೋತರು. ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನ್‌ನ ಫಿಯೊನಾ ವಿರುದ್ಧ 11-8, 11-3, 11-6ರಲ್ಲಿ ಜಯ ಗಳಿಸಿದ್ದ ಅವರು ಸೆಮಿಫೈನಲ್‌ನಲ್ಲಿ ಸಿಂಗಪುರದ ಕ್ಯಾನ್ ಸೆರ್ ಎದುರು 11-8, 11-3, 11-7 ಗೆದ್ದಿದ್ದರು.
19 ವರ್ಷದೊಳಗಿನವರ ವಿಭಾಗದ ಸೆಮಿಫೈನಲ್‌ನಲ್ಲಿ ಅವರು ಆಸ್ಟ್ರೇಲಿಯಾದ ಯಾಂಗ್ಜಿ ಲಿಯು ಎದುರು 8-11, 4-11, 11-6, 7-11ರಲ್ಲಿ ಸೋತರು. ಕ್ವಾರ್ಟರ್ ಫೈನಲ್‌ನಲ್ಲಿ ಪೋಲೆಂಡ್‌ನ ಅನಾ ಬ್ರಿಸ್ಕಾ ಅವರನ್ನು 11-5, 11-9, 11-7ರಲ್ಲಿ ಮಣಿಸಿದ್ದರು.
ಅರ್ಚನಾ–ಮಾನವ್ ಜೋಡಿಗೆ ಕಂಚಿನ ಪದಕ
ಸ್ಲೊವೇನಿಯಾದ ಲಾಸ್ಕೊದಲ್ಲಿ ನಡೆದ ಡಬ್ಲ್ಯುಟಿಟಿ ಕಂಟೆಂಡರ್ ಟೂರ್ನಿಯಲ್ಲಿ ಮಾನವ್ ಮತ್ತು ರಾಜ್ಯದ ಅರ್ಚನಾ ಜೋಡಿ ಮಿಶ್ರ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು.
ಸೆಮಿಫೈನಲ್‌ನಲ್ಲಿ ಈ ಜೋಡಿ ಚೀನಾದ ಲಿಯಾಂಗ್ ಮತ್ತು ಲಿಯು ವಿರುದ್ಧ 3-11, 4-11, 5-11ರಲ್ಲಿ ಸೋತರು. ಕ್ವಾರ್ಟರ್ ಫೈನಲ್‌ನಲ್ಲಿ ಅವರು ಆಸ್ಟ್ರೇಲಿಯದ ಯಾಂಗ್ ಮತ್ತು ಚಾಂಬರ್ಸ್ ಜೋಡಿಯನ್ನು 11-8, 11-7, 11-4ರಲ್ಲಿ ಸೋಲಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.