ಬುಧವಾರ, ನವೆಂಬರ್ 20, 2019
25 °C
ದಾಖಲೆ ಬಹುಮಾನ ಮೊತ್ತ ಗೆದ್ದ ಆಸ್ಟ್ರೇಲಿಯಾ ಆಟಗಾರ್ತಿ

ಟೆನಿಸ್‌: ಬಾರ್ಟಿಗೆ ಡಬ್ಲ್ಯುಟಿಎ ಗರಿ

Published:
Updated:
Prajavani

ಶೆನ್‌ಜೆನ್‌, ಚೀನಾ: ಸಾಮರ್ಥ್ಯಕ್ಕೆ ತಕ್ಕ ಆಟವಾಡಿದ ವಿಶ್ವ ಅಗ್ರ ಕ್ರಮಾಂಕದ ಆಟಗಾರ್ತಿ ಆಶ್ಲೆ ಬಾರ್ಟಿ ಅವರು ಡಬ್ಲ್ಯುಟಿಎ ಫೈನಲ್ಸ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಭಾನುವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಅವರು, ಹಾಲಿ ಚಾಂಪಿಯನ್‌ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಅವರನ್ನು 6–4, 6–3ರಿಂದ ಸೋಲಿಸಿದರು. ಟ್ರೋಫಿಯೊಂದಿಗೆ ಬಾರ್ಟಿ ಟೆನಿಸ್‌ ಇತಿಹಾಸದಲ್ಲೇ ಗರಿಷ್ಠ ನಗದು ಬಹುಮಾನ ತಮ್ಮದಾಗಿಸಿಕೊಂಡರು.

ದಾಖಲೆಯ ಸುಮಾರು ₹ 31 ಕೋಟಿ (4.42 ಮಿಲಿಯನ್‌ ಅಮೆರಿಕನ್‌ ಡಾಲರ್‌) ಬಹುಮಾನವನ್ನು ಆಸ್ಟ್ರೇಲಿಯಾದ ಬಾರ್ಟಿ ಪಡೆದರು.

 

ಪ್ರತಿಕ್ರಿಯಿಸಿ (+)