ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ ಚಾಂಪಿಯನ್‌ಷಿಪ್‌: ಆಶುಗೆ ಕಂಚು

Last Updated 5 ಫೆಬ್ರುವರಿ 2023, 13:14 IST
ಅಕ್ಷರ ಗಾತ್ರ

ಜಗ್ರೆಬ್: ಭಾರತದ ಆಶು ಅವರು ಜಗ್ರೆಬ್‌ ಓಪನ್‌ ರ್‍ಯಾಂಕಿಂಗ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದುಕೊಂಡರು.

ಭಾನುವಾರ ನಡೆದ ಗ್ರೀಕೊ ರೋಮನ್‌ 67 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಅವರು ಲಿಥುವೇನಿಯದ ಆಡಮ್ಸ್ ಗ್ರಿಗಾಲಿನಸ್‌ ವಿರುದ್ಧ 5–0 ರಲ್ಲಿ ಜಯಿಸಿದರು. ಈ ಕೂಟದಲ್ಲಿ ಭಾರತಕ್ಕೆ ಲಭಿಸಿದ ಎರಡನೇ ಪದಕ ಇದು. ಅಮನ್‌ ಸೆಹ್ರಾವತ್‌ ಅವರು ಪುರುಷರ 57 ಕೆ.ಜಿ. ವಿಭಾಗದಲ್ಲಿ ಕಂಚು ಗೆದ್ದಿದ್ದರು.

ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ವಿಜೇತ ಕುಸ್ತಿಪಟು ಆಶು, ಅರ್ಹತಾ ಸುತ್ತಿನಲ್ಲಿ 0–9 ರಲ್ಲಿ ಇರಾನ್‌ನ ರೆಜಾ ಮೆಹ್ದಿ ಅಬ್ಬಾಸಿ ಕೈಯಲ್ಲಿ ಪರಾಭವಗೊಂಡಿದ್ದರು.

ಆ ಬಳಿಕ ನಡೆದ ‘ರಿಪೇಜ್‌’ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿ, 8–0 ರಲ್ಲಿ ಹಂಗರಿಯ ಆ್ಯಡಮ್‌ ಫೊಯ್ಲಿಕ್‌ ವಿರುದ್ಧವೂ, 9–0 ರಲ್ಲಿ ನಾರ್ವೆಯ ಹಾವರ್ಡ್‌ ಜರ್ಗೆನ್ಸನ್‌ ಎದುರೂ ಗೆದ್ದು ಕಂಚಿನ ಪದಕದ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT