ಇವರು ಮತದಾನಕ್ಕೆ ಅರ್ಹತೆ ಪಡೆದ ನಂತರ ನಡೆದ ಲೋಕಸಭೆ, ವಿಧಾನಸಭೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯ ಸುಮಾರು 50ಕ್ಕೂ ಹೆಚ್ವು ಚುನಾವಣೆಗಳಲ್ಲಿ ತಪ್ಪದೇ ಮತ ಚಲಾಯಿಸುತ್ತಾ ಬಂದಿದ್ದಾರಂತೆ. ಮತದಾನದ ಮಹತ್ವದ ಬಗ್ಗೆ ತಮ್ಮ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿಮಕ್ಕಳಿಗೆ ತಿಳಿಹೇಳುತ್ತ ಮಾದರಿಯಾಗಿದ್ದಾರೆ.