ಬ್ಯಾಡ್ಮಿಂಟನ್: ಪ್ರಣವ್‌, ಅನ್ಶುಲ್‌ಗೆ ಜಯ

ಮಂಗಳವಾರ, ಜೂಲೈ 23, 2019
24 °C

ಬ್ಯಾಡ್ಮಿಂಟನ್: ಪ್ರಣವ್‌, ಅನ್ಶುಲ್‌ಗೆ ಜಯ

Published:
Updated:

ಉಡುಪಿ: ಕರ್ನಾಟಕದ ಪ್ರಣವ್ ವೆಂಪತಿ ಮತ್ತು ಅನ್ಶುಲ್‌, ಯೋನೆಕ್ಸ್ ಸನ್‌ರೈಸ್‌ ಆಲ್ ಇಂಡಿಯಾ ಸಬ್ ಜೂನಿಯರ್ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್ ಟೂರ್ನಿಯ ಬಾಲಕರ ಸಿಂಗಲ್ಸ್‌ ನಾಲ್ಕನೇ ಸುತ್ತಿಗೆ ಮುನ್ನಡೆದರು.

ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಬುಧವಾರ, ಪ್ರಣವ್‌ 15–4, 15–6 ರಿಂದ ಆಂಧ್ರ ಪ್ರದೇಶದ ಕರಾಮತ್‌ ಉಲ್‌ ಹಕ್‌ ಮೊಹಮದ್‌ ಮೇಲೆ ಜಯಗಳಿಸಿದರೆ, ಅನ್ಶುಲ್‌ 15–10, 13–15, 15–12 ರಲ್ಲಿ ಆಂಧ್ರದ ನಂದಕಿಶೋರ್‌ ವಿಜಯ್‌ ವಿರುದ್ಧ 15-10, 13-15 15-12 ರಲ್ಲಿ 2–1 ಗೇಮ್‌ಗಳಿಂದ ಜಯಗಳಿಸಿದ.

ಬಾಲಕಿಯರ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಕರ್ನಾಟಕದ ಪ್ರೀತಿ ಆರ್.ರಾವ್‌ 16-14 15-3 ರಿಂದ ತೆಲಂಗಾಣದ ವೈಷ್ಣವಿ ವಿರುದ್ಧ; 
ಅನುಷ್ಕಾ ಬರಾಯ್‌ 15-13 15-5 ರಿಂದ ಉತ್ತರ ಪ್ರದೇಶದ ಸೌಮ್ಯಾ ದಹರಾನ್ ವಿರುದ್ಧ; ದಿಶಾ ಸಂತೋಷ್‌ 15-12 15-12 ದೆಹಲಿಯ ಸೋಫಿಯಾ ಗೋಸೆನ್‌ ವಿರುದ್ಧ ಜಯಗಳಿಸಿದರು.

ಎಂ.ನೀತಿ 15–10, 17–15ರಲ್ಲಿ ಗುಜರಾತ್‌ನ ಮುಸ್ಕಾನ್ ಗುಪ್ತಾ ವಿರುದ್ಧ, ಮೇಘಶ್ರೀ 15–3, 15–11ರಲ್ಲಿ  ತಮಿಳುನಾಡಿನ ದರ್ಶಿನಿ ಎನ್‌.ಪ್ರಿಯಾ ವಿರುದ್ಧ ಜಯಗಳಿಸಿದರು.

ಬಾಲಕಿಯರ ಡಬಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಕರ್ನಾಟಕದ ಆರಾಧನಾ ಪದಮಟ ಹಾಗೂ ಪ್ರೀತಿ ಆರ್.ರಾವ್ ಜೋಡಿ 15-10 15-7 ರಿಂದ ಕೇರಳದ ಆವಂತಿಕಾ ರಾಜೇಶ್‌ ಹಾಗೂ ಶ್ವೇತಾ ಜೋಡಿಯನ್ನು ಸೋಲಿಸಿದರು.

ಮೌನಿತಾ ಹಾಗೂ ಅನುಷ್ಕಾ ಬರಾಯ್ ಜೋಡಿ 15-13 15-9 ರಿಂದ ಆಂಧ್ರಪ್ರದೇಶದ ಸರ್ವಣಿ ಪಿಲ್ಲಾಲ ಹಾಗೂ ವೈಷ್ಣವಿ ವಜಾಯಿಲ್ ಜೋಡಿಯನ್ನು ಸೋಲಿಸಿತು. ದಿಯಾ ಭೀಮಯ್ಯ ಹಾಗೂ ಅಮೂಲ್ಯಾ ಅಭಿಲಾಶ್ ಕಶ್ಯಪ್‌ ಜೋಡಿ 15–9, 15–6 ರಲ್ಲಿ ಕೇರಳದ ತೇಜಸ್ವಿನಿ ಅನಿಲ್ ಹಾಗೂ ಎಲಿಸಾ ಡ್ರೋನಾ ಜೋಡಿಯನ್ನು ಮಣಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !