ಶನಿವಾರ, ಜನವರಿ 18, 2020
20 °C
ಅಖಿಲ ಭಾರತ ಅಂತರ ವಿವಿ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌

ಬ್ಯಾಡ್ಮಿಂಟನ್‌: ಜೈನ್‌ ವಿವಿ ಚಾಂಪಿಯನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರಿನ ಜೈನ್‌ ವಿಶ್ವವಿದ್ಯಾಲಯ ತಂಡವು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದೆ.

ನಾಂದೇಡ್‌ನ ಸ್ವಾಮಿ ರಮಾನಂದ ತೀರ್ಥ ಮರಾಠವಾಡ ವಿವಿ ಆಯೋಜಿಸಿದ್ದ ಚಾಂಪಿಯನ್‌ಷಿಪ್‌ನ ಫೈನಲ್‌ ಪಂದ್ಯದಲ್ಲಿ ಜೈನ್‌ ವಿವಿ ತಂಡವು ಚಂಡೀಗಡದ ಪಂಜಾಬ್‌ ವಿವಿಯನ್ನು 3–2ರಿಂದ ಸೋಲಿಸಿತು. 15 ವರ್ಷಗಳಲ್ಲಿ ಈ ಪ್ರಶಸ್ತಿ ಗೆದ್ದ ಕರ್ನಾಟಕದ ಮೊದಲ ತಂಡವಾಗಿ ಜೈನ್‌ ವಿವಿ ಹೊರಹೊಮ್ಮಿತು.

ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಜೈನ್‌ ವಿವಿಯ ಡೇನಿಯಲ್‌ ಎಸ್‌. ಫರೀದ್‌ ಅವರು ಪಂಜಾಬ್‌ನ ಕಾರ್ತಿಕ್‌ ಅವರಿಗೆ 11–21, 20–22ರಿಂದ ಸೋತರು. ಜೈನ್‌ ವಿವಿಯ ರೋಹಿತ್‌, ಪಂಜಾಬ್‌ನ ಅಭೀಷೇಕ್‌ ಸೈನಿ ಎದುರು 22–20, 15–21, 21–19ರಿಂದ ಜಯಿಸಿದರು. ಸಿಂಗಲ್ಸ್‌ ವಿಭಾಗದ ಮೂರನೇ ಪಂದ್ಯದಲ್ಲಿ ಜೈನ್‌ ತಂಡದ ನಿಖಿಲ್‌ ಶ್ಯಾಮ್‌ ಶ್ರೀರಾಮ್‌ ಅವರು ಪಂಜಾಬ್‌ನ ಹಾರ್ದಿಕ್‌ ಮಕ್ಕರ್‌ ಎದುರು 21–15, 19–21, 21–13ರಿಂದ ಗೆದ್ದರು.

ಡಬಲ್ಸ್ ವಿಭಾಗ ಪಂದ್ಯದಲ್ಲಿ ಜೈನ್‌ ವಿವಿಯ ಸೈಫ್‌ ಅಲಿ–ಗಣೇಶ್‌ ಜೋಡಿಯು ಪಂಜಾಬ್ ವಿವಿಯ ಕಾರ್ತಿಕ್‌ ಜಿಂದಾಲ್‌–ಹಾರ್ದಿಕ್‌ ಮಕ್ಕರ್‌ ಎದುರು 11–21, 14–21ರಿಂದ ಮಣಿಯಿತು. ಮತ್ತೊಂದು ಪಂದ್ಯದಲ್ಲಿ ಡೇನಿಯಲ್‌–ಸಾಯಿ ಪ್ರತೀಕ್‌ ಅವರು ಪಂಜಾಬ್‌ ವಿವಿಯ ಅಭಿಷೇಕ್‌ ಸೈನಿ–ತಲ್ವಿಂದರ್‌ ಸಿಂಗ್‌ ಎದುರು 21–14, 21–16ರಿಂದ ಗೆದ್ದು ಬೀಗಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು