ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಲೀಗ್‌: ಪ್ಯಾಂಥರ್ಸ್ ಮೇಲೆ ಲಯನ್ಸ್ ಸವಾರಿ

ನಿತಿನ್‌ ಮಿಂಚು
Last Updated 13 ಆಗಸ್ಟ್ 2022, 15:56 IST
ಅಕ್ಷರ ಗಾತ್ರ

ಬೆಂಗಳೂರು: ಹಿನ್ನಡೆಯಿಂದ ಚೇತರಿಸಿಕೊಂಡ ಬೆಂಗಳೂರು ಲಯನ್ಸ್ ತಂಡವು ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್‌ ಲೀಗ್‌ ಪಂದ್ಯದಲ್ಲಿ ಮೈಸೂರು ಪ್ಯಾಂಥರ್ಸ್‌ ತಂಡವನ್ನು ಮಣಿಸಿತು.

ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆ (ಕೆಬಿಎ) ಅಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಬಿ ಗುಂಪಿನ ಸೆಣಸಾಟದಲ್ಲಿ ಶನಿವಾರ ಬೆಂಗಳೂರು ಲಯನ್ಸ್ 7–2ರಿಂದ ಪ್ಯಾಂಥರ್ಸ್‌ ಎದುರು ಗೆದ್ದಿತು.

ಮಹಿಳಾ ಸಿಂಗಲ್ಸ್‌ನ ಟ್ರಂಪ್‌ ಪಂದ್ಯದಲ್ಲಿಪ್ಯಾಂಥರ್ಸ್‌ನ ತಾನ್ಯಾ ಹೇಮಂತ್‌ 15–7, 15–3ರಿಂದ ಜನನಿ ಅನಂತ್ ಕುಮಾರ್ ಎದುರು ಗೆದ್ದರು. ಬಳಿಕ ಪುರುಷರ ಡಬಲ್ಸ್‌ನಲ್ಲಿ ಲಯನ್ಸ್‌ನ ಸಂಜೀತ್ ಎಸ್‌.– ವೈಭವ್ ಶರತ್‌13-15, 15-14, 15-6ರಿಂದ ರಾಹುಲ್ ಮತ್ತು ರೋಹಿತ್ ಮರಿಸ್ವಾಮಿ ಅವರನ್ನು ಮಣಿಸಿದರು.

ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಲಯನ್ಸ್‌ನ ಎಸ್‌. ಭಾರ್ಗವ್‌15-10, 15-9ರಿಂದ ತರುಣ್ ಮೊರಬ್ ಎದುರು ಗೆದ್ದರೆ, ಮಿಶ್ರ ಡಬಲ್ಸ್‌ನಲ್ಲಿ ನಿತಿನ್ ಎಚ್‌.ವಿ.– ಜನನಿ ಅನಂತ್‌ಕುಮಾರ್13-15, 15-10, 15-7ರಿಂದ ಕಿರಣ್‌ಕುಮಾರ್ ಜಿ.– ತಾನ್ಯಾ ಹೇಮಂತ್ ಅವರಿಗೆ ಸೋಲುಣಿಸಿದರು.

ಕೊನೆಯ ಪಂದ್ಯದಲ್ಲಿ ವೈಭವ್ ಶ್ರೀನಾಥ್‌, ನಿತಿನ್‌ ಮತ್ತು ಸಂಜೀತ್‌ 22-20ರಿಂದ ರೋಹಿತ್‌, ಬಿ.ಎಚ್‌.ರಾಹುಲ್‌ ಮತ್ತು ಕಿರಣ್‌ಕುಮಾರ್ ಜಿ. ಎದುರು ಗೆದ್ದರು.

ಇಂದಿನ ಪಂದ್ಯಗಳು
ಕೊಡಗು ಟೈಗರ್ಸ್–ಬಂಡೀಪುರ ಟಸ್ಕರ್ಸ್

ಆರಂಭ: ಮಧ್ಯಾಹ್ನ 3

ಮಂಡ್ಯ ಬುಲ್ಸ್– ಮಂಗಳೂರು ಶಾರ್ಕ್ಸ್
ಆರಂಭ: ಸಂಜೆ 6

ನೇರ ಪ್ರಸಾರ: ಯೂರೊ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT