ಗುರುವಾರ , ಮಾರ್ಚ್ 30, 2023
32 °C

ಶೂಟಿಂಗ್‌: ಮನು ಭಾಕರ್ ಜೋಡಿಗೆ ಚಿನ್ನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವ್ರಾಕ್‌ಲಾ, ಪೋಲೆಂಡ್: ಭಾರತದ ಮನು ಭಾಕರ್ ಮತ್ತು ಇರಾನ್‌ನ ಜವಾದ್‌ ಫರೋಗಿ ಜೋಡಿ ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಪ್ರೆಸಿಡೆಂಟ್ಸ್ ಕಪ್ ಶೂಟಿಂಗ್‌ನ ಏರ್ ಪಿಸ್ತೂಲು ಮಿಶ್ರ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡರು.

ಒಲಿಂಪಿಕ್ ಚಾಂಪಿಯನ್ ಜವಾದ್ ಜೊತೆಗೂಡಿ ಅಮೋಘ ಸಾಮರ್ಥ್ಯ ತೋರಿದ ಮನು ಶುಕ್ರವಾರದ ಹಣಾಹಣಿಯಲ್ಲಿ ಫ್ರಾನ್ಸ್ ಮತ್ತು ರಷ್ಯಾದ ಜೋಡಿ ಮಥಿಲ್ಡೆ ರಮೊಲಿ ಮತ್ತು ಆರ್ಟೆಮ್ ಚೆರ್ನೊಸೊವ್‌ ಅವರನ್ನು 16–8ರಲ್ಲಿ ಮಣಿಸಿದರು.  

ಅಭಿಷೇಕ್ ವರ್ಮಾ ಮತ್ತು ಉಕ್ರೇನ್‌ನ ಒಲೆನಾ ಕೊಸ್ಟೆವಿಚ್‌ ಆರನೇ ಸ್ಥಾನ ಗಳಿಸಿದರು. ಸೌರಭ್‌ ಚೌಧರಿ ಮತ್ತು ಸ್ವಿಜರ್ಲೆಂಡ್‌ನ ಹೇದಿ ಗರ್ಬರ್ ಏಳನೇ ಸ್ಥಾನ ಗಳಿಸಿದರು. ಯಶಸ್ವಿನಿ ದೇಸ್ವಾಲ್ ಮತ್ತು ಸ್ಲೊವಾಕಿಯಾದ ಜುರಾಜ್ ತುಜಿನ್‌ಸ್ಕಿ 12 ಜೋಡಿ ಒಳಗೊಂಡ ಸ್ಪರ್ಧೆಯಲ್ಲಿ 10ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು