ಗುರುವಾರ , ಡಿಸೆಂಬರ್ 5, 2019
20 °C

ಭುವನೇಶ್ವರಕ್ಕೆ ಎಚ್‌ಪಿಎಲ್‌ ಆತಿಥ್ಯ

Published:
Updated:

ನವದೆಹಲಿ: ಭಾರತದಲ್ಲಿ ನಡೆಯುವ 2020ರ ಆವೃತ್ತಿಯ ಹಾಕಿ ಪ್ರೊ ಲೀಗ್‌ನ ಪಂದ್ಯಗಳಿಗೆ ಒಡಿಶಾದ ಭುವನೇಶ್ವರ ಆತಿಥ್ಯ ವಹಿಸಲಿದೆ ಎಂದು ಹಾಕಿ ಇಂಡಿಯಾ ತಿಳಿಸಿದೆ.

ಲೀಗ್‌ನ ಎರಡನೇ ಆವೃತ್ತಿಯನ್ನು ಜನವರಿ 11ರಿಂದ ಜೂನ್‌ 28ರವರೆಗೆ ಆಯೋಜಿಸಲು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್‌ಐಎಚ್‌) ನಿರ್ಧರಿಸಿದೆ.

ಒಡಿಶಾದ ರಾಜಧಾನಿ ಭುವನೇಶ್ವರ ಹಾಕಿ ಹಬ್‌ ಆಗಿ ಮಾರ್ಪಟ್ಟಿದೆ. ಬಹ ಳಷ್ಟು ಹಾಕಿ ಟೂರ್ನಿಗಳನ್ನು ಈ ನಗರ ಆಯೋಜಿಸುತ್ತಿದೆ. ಮುಂಬರುವ ಪ್ರೊ ಲೀಗ್‌ 144 ಪಂದ್ಯಗಳನ್ನು ಒಳಗೊಂಡಿದೆ. ಆಸ್ಟ್ರೇ ಲಿಯಾ ತನ್ನ ತವರಿನ ಪಂದ್ಯಗಳನ್ನು ಪರ್ತ್‌, ಸಿಡ್ನಿಯಲ್ಲಿ ಆಡಲಿದ್ದರೆ; ಇಂಗ್ಲೆಂಡ್‌ ಪಾಲಿನ ಪಂದ್ಯಗಳಿಗೆ ಲಂಡನ್‌ ಆತಿಥ್ಯ ವಹಿಸಲಿದೆ. ಜ.11ರಂದು ನಡೆಯುವ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್ ಹಾಗೂ ಚೀನಾ ಆಡಲಿವೆ. ಚೀನಾದ ಚಾಂಗ್‌ಜೌನ ವುಜಿನ್‌ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜಿತವಾಗಿದೆ.

ಪ್ರತಿಕ್ರಿಯಿಸಿ (+)