ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್‌: ಕ್ವಾರ್ಟರ್‌ಗೆ ನಿಖತ್‌ ಜರೀನ್‌

Last Updated 23 ಜನವರಿ 2020, 14:37 IST
ಅಕ್ಷರ ಗಾತ್ರ

ನವದೆಹಲಿ : ಭಾರತದ ನಿಖತ್‌ ಜರೀನ್‌ ಅವರು ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ ಸ್ಟ್ರಾಂಜಾ ಸ್ಮಾರಕ ಬಾಕ್ಸಿಂಗ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಬುಧವಾರ ನಿಗದಿಯಾಗಿದ್ದ ಮಹಿಳೆಯರ 51 ಕೆ.ಜಿ. ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಜರೀನ್‌ ಅವರು ಸೆವ್ಡಾ ಅಸೆನೊವಾ ವಿರುದ್ಧ ಸೆಣಸಬೇಕಿತ್ತು. ಅಸೆನೊವಾ ಪಂದ್ಯದಿಂದ ಹಿಂದೆ ಸರಿದ ಕಾರಣ ಭಾರತದ ಬಾಕ್ಸರ್‌ ಎಂಟರ ಘಟ್ಟಕ್ಕೆ ಮುನ್ನಡೆದರು.

ಮಂಗಳವಾರ ನಡೆದಿದ್ದ ಆರಂಭಿಕ ಸುತ್ತಿನ ಪೈಪೋಟಿಯಲ್ಲಿ ಹೈದರಾಬಾದ್‌ನ ನಿಖತ್‌ 5–0 ಪಾಯಿಂಟ್ಸ್‌ನಿಂದ ಯಾಸ್ಮಿನ್‌ ಮೌಟಾಕಿ ಎದುರು ಗೆದ್ದಿದ್ದರು.

ಎರಡನೇ ಸುತ್ತಿಗೆ ದುರ್ಯೋಧನ: ಪುರುಷರ ವಿಭಾಗದಲ್ಲಿ ಕಣದಲ್ಲಿರುವ ದುರ್ಯೋಧನ ಸಿಂಗ್‌ ನೇಗಿ ಮತ್ತು ಮೊಹಮ್ಮದ್‌ ಹಸಮುದ್ದೀನ್‌ ಅವರು ಎರಡನೇ ಸುತ್ತು ಪ್ರವೇಶಿಸಿದರು.

69 ಕೆ.ಜಿ. ವಿಭಾಗದ ಮೊದಲ ಸುತ್ತಿನ ಪೈಪೋಟಿಯಲ್ಲಿ ದುರ್ಯೋಧನ 4–1ರಿಂದ ಪೋಲೆಂಡ್‌ನ ಮಟೆವುಸ್ಜ ಪೋಲಸ್ಕಿ ಅವರನ್ನು ಮಣಿಸಿದರು. 57 ಕೆ.ಜಿ.ವಿಭಾಗದ ಪೈಪೋಟಿಯಲ್ಲಿ ಹಸಮುದ್ದೀನ್‌ 4–1ರಿಂದ ಫ್ರಾನ್ಸ್‌ನ ಎಂಜೊ ಗ್ರಾವು ಎದುರು ಜಯಿಸಿದರು.

ಅಂಕಿತ್‌ ಖಾಟನಾ (75 ಕೆ.ಜಿ), ದೀಪಕ್‌ ಕುಮಾರ್‌ (52), ನರೇಂದರ್‌ (+91) ಮತ್ತ ನವೀನ್‌ ಕುಮಾರ್‌ (91) ಅವರು ಮೊದಲ ಸುತ್ತಿನಲ್ಲೇ ಸೋತರು.

ಮಹಿಳಾ ವಿಭಾಗದಲ್ಲಿ ರಿಂಗ್‌ಗೆ ಇಳಿದಿದ್ದ ನೂಪುರ್‌ (75 ಕೆ.ಜಿ) ಮತ್ತು ಲಲಿತಾ (69 ಕೆ.ಜಿ) ಅವರೂ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು.

ಏಷ್ಯನ್‌ ಚಾಂ‍ಪಿಯನ್‌ಷಿಪ್‌ನಲ್ಲಿ ನಾಲ್ಕು ಪದಕಗಳನ್ನು ಜಯಿಸಿರುವ ಶಿವ ಥಾಪಾ 63 ಕೆ.ಜಿ. ವಿಭಾಗದಲ್ಲಿ ಕಣದಲ್ಲಿದ್ದು, ಮೊದಲ ಸುತ್ತಿನಲ್ಲಿ ‘ಬೈ’ ಪಡೆದಿದ್ದಾರೆ. ಮುಂದಿನ ಸುತ್ತಿನಲ್ಲಿ ಅವರು ಪೋಲೆಂಡ್‌ನ ಪವೆಲ್‌ ಪೊಲಾಕೊವಿಕ್‌ ವಿರುದ್ಧ ಸೆಣಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT