ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಸುಹಾಸ್ ಹುಟ್ಟೂರಲ್ಲಿ ಸಂಭ್ರಮ

Last Updated 6 ಸೆಪ್ಟೆಂಬರ್ 2021, 1:38 IST
ಅಕ್ಷರ ಗಾತ್ರ

ಹಾಸನ: ಟೋಕಿಯೊ ಪ್ಯಾರಾಲಿಂಪಿ ಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಸುಹಾಸ್‌ ಯತಿರಾಜ್‌ ಅವರ ಹುಟ್ಟೂರು ಅರಸೀಕೆರೆ ತಾಲ್ಲೂಕಿನ ಲಾಳನಕೆರೆ ಗ್ರಾಮದಲ್ಲಿ ಭಾನುವಾರ ಸಂಭ್ರಮ ಮನೆ ಮಾಡಿತ್ತು. ಗ್ರಾಮಸ್ಥರು ಸಿಹಿ ಹಂಚಿ, ಕುಣಿದು ಕುಪ್ಪಳಿಸಿದರು.

ಸುಹಾಸ್‌ ತಮ್ಮ ಸಾಧನೆ ಮೂಲಕ ಹಳ್ಳಿಯನ್ನೂ ಜಗತ್ತಿಗೆ ಪರಿಚಯಿಸಿದ್ದು, ಊರಿನ ಜನರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

‘ನಮ್‌ ಹುಡುಗ ಪ್ಯಾರಾಲಿಂಪಿಕ್ಸ್‌ನಲ್ಲಿಬೆಳ್ಳಿ ಪದಕ ಗೆದ್ದು, ಗ್ರಾಮದ ಗೌರವ ಹೆಚ್ಚಿಸಿದ್ದಾನೆ’ ಎಂದು ಗುಣ ಗಾನಮಾಡಿದರು.

‘ದೇಶ ಹಾಗೂ ಜಿಲ್ಲೆಗೆ ಸುಹಾಸ್‌ ಕೀರ್ತಿ ತಂದಿದ್ದಾರೆ. ಅವರನ್ನು ನಮ್ಮೂರಿಗೆ ಕರೆಸಿ, ಸನ್ಮಾನ ಮಾಡ ಬೇಕು. ಇದು ನಮ್ಮೂರ ಮಗನಿಗೆ ಕೊಡುವ ಗೌರವವಾಗಬೇಕು’ ಎಂದು ಗ್ರಾಮಸ್ಥ ರಾಜೇಗೌಡ ಹೇಳಿದರು.

ಹಾಸನದಲ್ಲೇ ಪ್ರಾಥಮಿಕ ಶಿಕ್ಷಣ ಆರಂಭಿಸಿದ ಸುಹಾಸ್, ಶಿವಮೊಗ್ಗದ ಡಿವಿಎಸ್ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದರು. ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನಲ್ಲಿರುವ ಎನ್‌ಐಟಿಯಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಪದವಿ ಪೂರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT