ಮಂಗಳವಾರ, ಏಪ್ರಿಲ್ 7, 2020
19 °C

ಚೆಸ್‌ ರ‍್ಯಾಂಕಿಂಗ್‌: ಕೊನೆರು ಹಂಪಿಗೆ ಎರಡನೇ ಸ್ಥಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಕೊನೆರು ವಿಶ್ವ ಚೆಸ್‌ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಹಾಲಿ ವಿಶ್ವ ಚಾಂಪಿಯನ್‌ ಚೀನಾದ ಜು ವೆಂಜುನ್‌ ಅವರನ್ನು ಹಂಪಿ ಹಿಂದಿಕ್ಕಿದ್ದಾರೆ.

ವಿಶ್ವ ರ‍್ಯಾಪಿಡ್‌ ವಿಭಾಗದ ಚಾಂಪಿಯನ್‌ ಹಂಪಿ ಅವರು ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಕೈರನ್ಸ್ ಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದರು.

ಈ ಟೂರ್ನಿಯಲ್ಲಿ ವೆಂಜುನ್‌ ಕೂಡ ಇದ್ದರು.

ಮಾರ್ಚ್‌ ತಿಂಗಳ ಫಿಡೆ ರ‍್ಯಾಂಕಿಂಗ್‌ ಆಧಾರದಲ್ಲಿ ಹಂಪಿ ಅವರು ಚೀನಾದ ಯಿಫಾನ್‌ ಹು ಅವರಿಗಿಂತ ಹಿಂದಿದ್ದಾರೆ.

ಸತತ ಮೂರು ಪ್ರಮುಖ ಟೂರ್ನಿಗಳಲ್ಲಿ ಗೆಲುವು ಅಥವಾ ಮೊದಲ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಅವರು 2586 ಇಎಲ್‌ಒ ಪಾಯಿಂಟ್ಸ್‌ ಗಳಿಸಿದ್ದಾರೆ. ಯಿಫಾನ್‌ 2658 ಪಾಯಿಂಟ್ಸ್ ಗಳಿಸಿದ್ದಾರೆ.

ಗ್ರ್ಯಾಂಡ್‌ ಮಾಸ್ಟರ್‌ ಹರಿಕಾ ದ್ರೋಣವಳ್ಳಿ ಒಂಬತ್ತನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು