ಬುಧವಾರ, ಆಗಸ್ಟ್ 21, 2019
25 °C

ಪ್ರೊ ಕಬಡ್ಡಿ: ದಬಂಗ್‌ ಡೆಲ್ಲಿ ಅಗ್ರ ಸ್ಥಾನಕ್ಕೆ

Published:
Updated:
Prajavani

ಪಟ್ನಾ: ಅಮೋಘ ಆಟವಾಡಿದ ದಬಂಗ್ ಡೆಲ್ಲಿ ತಂಡ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಎದುರು ಜಯ ಗಳಿಸಿ ಪಾಯಿಂಟ್ ಪಟ್ಟಿಯ ಅಗ್ರಸ್ಥಾನಕ್ಕೇರಿತು. ಪಾಟಲಿಪುತ್ರ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ದಬಂಗ್‌ 35–24ರಲ್ಲಿ ಗೆದ್ದಿತು. ಇದರೊಂದಿಗೆ ತಂಡದ ಖಾತೆಗೆ 21 ಪಾಯಿಂಟ್‌ಗಳು ಸೇರಿದವು. 20 ಪಾಯಿಂಟ್‌ಗಳೊಂದಿಗೆ ಪಿಂಕ್ ಪ್ಯಾಂಥರ್ಸ್ ಎರಡನೇ ಸ್ಥಾನದಲ್ಲಿ ಉಳಿಯಿತು.

ದೀಪಕ್ ಹೂಡ ತಂದುಕೊಟ್ಟ ಪಾಯಿಂಟ್‌ಗಳ ಮೂಲಕ ಆರಂಭದಲ್ಲಿ ಪಿಂಕ್ ಪ್ಯಾಂಥರ್ಸ್ ಮುನ್ನಡೆ ಗಳಿಸಿತ್ತು. ಆದರೆ ‘ಸೂಪರ್ ಟೆನ್’ ಸಾಧನೆ ಮಾಡಿದ ನವೀನ್ ಕುಮಾರ್ ಮತ್ತು ರಂಜಿತ್ ಚಂದ್ರನ್ ಅವರ ಆಟದ ಬಲದಿಂದ ದಬಂಗ್ ಡೆಲ್ಲಿ ಹಿಡಿತ ಸಾಧಿಸಿತು. ಎರಡು ಬೋನಸ್ ಒಳಗೊಂಡಂತೆ ನವೀನ್ ಒಟ್ಟು 12 ಪಾಯಿಂಟ್ ತುಂದುಕೊಟ್ಟರು. ಚಂದ್ರನ್‌ ಒಂದು ಬೋನಸ್‌, ಎರಡು ಟ್ಯಾಕಲ್ ಒಳಗೊಂಡಂತೆ 10 ಪಾಯಿಂಟ್ ಗಳಿಸಿದರು.

ಜೈಪುರ ಪರ ದೀಪಕ್‌ ಹೂಡ ‘ಸೂಪರ್ 10’ ಗಳಿಸಿದರು. ಎರಡು ಬೋನಸ್, ಒಂದು ಟ್ಯಾಕಲ್ ಒಳಗೊಂಡ 11 ಪಾಯಿಂಟ್‌ ಅವರ ಖಾತೆಗೆ ಸೇರಿದವು. ದೀಪಕ್ ನರ್ವಾಲ್ ಐದು ಪಾಯಿಂಟ್ ಕಲೆ ಹಾಕಿದರು.

Post Comments (+)