ದಸರಾ ಕ್ರೀಡಾಕೂಟ ಇಂದಿನಿಂದ: 4,500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿ

7

ದಸರಾ ಕ್ರೀಡಾಕೂಟ ಇಂದಿನಿಂದ: 4,500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿ

Published:
Updated:

ಮೈಸೂರು: ದಸರಾ ಕ್ರೀಡಾಕೂಟಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವೇದಿಕೆ ಸಜ್ಜುಗೊಂಡಿದ್ದು, ಬುಧವಾರದಿಂದ ವಿವಿಧ ಕ್ರೀಡೆಗಳಿಗೆ ಚಾಲನೆ ಲಭಿಸಲಿದೆ.

ಈ ಬಾರಿಯ ಕ್ರೀಡಾಕೂಟವನ್ನು ‘ದಸರಾ ಸಿ.ಎಂ ಕಪ್’ ಹೆಸರಿನಲ್ಲಿ ನಡೆಸಲಾಗುತ್ತಿದೆ. ಒಟ್ಟು 31 ಸ್ಪರ್ಧೆಗಳು ನಡೆಯಲಿದ್ದು, ಸುಮಾರು 4,500 ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ರೈಫಲ್‌ ಶೂಟಿಂಗ್‌ ಸ್ಪರ್ಧೆ ಬೆಂಗಳೂರಿನಲ್ಲಿ ನಡೆಯಲಿದ್ದು, ಇನ್ನುಳಿದ 30 ಕ್ರೀಡೆಗಳು ಮೈಸೂರಿನಲ್ಲಿ ಆಯೋಜನೆಯಾಗಿವೆ.

ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ನಡೆಯಲಿರುವ ಸಮಾರಂಭದಲ್ಲಿ ಅಂತರರಾಷ್ಟ್ರೀಯ ಅಥ್ಲೀಟ್‌ ಎಂ.ಆರ್‌.ಪೂವಮ್ಮ ಅವರು ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ.

ಇಂದಿನಿಂದ ನಾಡಕುಸ್ತಿ: ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ನಾಡ ಕುಸ್ತಿ ಸ್ಪರ್ಧೆ ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಬುಧವಾರದಿಂದ ನಡೆಯಲಿದೆ.

ಅ.11 ರಂದು ಮೈಸೂರು ವಿಭಾಗ ಮಟ್ಟದ ಪುರುಷರ ಫ್ರೀಸ್ಟೈಲ್ ಸ್ಪರ್ಧೆ, ಅ.12 ರಂದು ಪುರುಷರ ರಾಜ್ಯಮಟ್ಟದ ಗ್ರೀಕೊ ರೋಮನ್ ಕುಸ್ತಿ, ಅ.13 ರಂದು ಮಹಿಳೆಯರ ರಾಜ್ಯಮಟ್ಟದ ಕುಸ್ತಿ, ಅ.14 ರಂದು ಪುರುಷರ ರಾಜ್ಯಮಟ್ಟದ ಫ್ರೀಸ್ಟೈಲ್ ಕುಸ್ತಿ ನಡೆಯಲಿದೆ.

ದಸರಾ ಕಂಠೀರವ, ದಸರಾ ಕೇಸರಿ, ದಸರಾ ಕುಮಾರ್‌ ಮತ್ತು ಮಹಿಳೆಯರ ವಿಭಾಗದಲ್ಲಿ ದಸರಾ ಕಿಶೋರಿ ಪ್ರಶಸ್ತಿಗೆ ಅ.15 ರಂದು ಹಣಾಹಣಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !