ಮುಂದಿನ ಗುರಿ ಏಷ್ಯನ್‌ ಚಾಂಪಿಯನ್‌ಷಿಪ್‌: ಧರುಣ್‌

7

ಮುಂದಿನ ಗುರಿ ಏಷ್ಯನ್‌ ಚಾಂಪಿಯನ್‌ಷಿಪ್‌: ಧರುಣ್‌

Published:
Updated:
Deccan Herald

ನವದೆಹಲಿ: ಭಾರತದ ಅಥ್ಲೀಟ್‌ ಧರುಣ್‌ ಅಯ್ಯಸಾಮಿ ಅವರು ಮುಂದಿನ ವರ್ಷ ನಡೆಯುವ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ. 

ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯನ್‌ ಕ್ರೀಡಾಕೂಟದ ಪುರುಷರ 400 ಮೀಟರ್ಸ್‌ ಹರ್ಡಲ್ಸ್‌ನಲ್ಲಿ ಧರುಣ್‌ ಬೆಳ್ಳಿಯ ಸಾಧನೆ ಮಾಡಿದ್ದರು. ಅವರು 48.96 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು. 

‘ನನ್ನ ಮುಂದಿನ ಗುರಿ ಏಷ್ಯನ್‌ ಚಾಂಪಿಯನ್‌ಷಿಪ್‌. ಅಲ್ಲಿ ಪದಕ ಗೆಲ್ಲುಬೇಕು. ಕತಾರ್‌ನಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕೂಟ ಉತ್ತಮ ಸಾಮರ್ಥ್ಯ ತೋರಬೇಕಿದೆ’ ಎಂದು ಅವರು ಹೇಳಿದ್ದಾರೆ. 

‘ಮುಂದಿನ ವರ್ಷದಲ್ಲಿ 48.50 ಸೆಕೆಂಡುಗಳಲ್ಲಿ ಗುರಿ ತಲುಪುವ ನಿಟ್ಟಿನಲ್ಲಿ ಅಭ್ಯಾಸ ನಡೆಸುತ್ತೇನೆ. ಜೊತೆಗೆ, 2020ರ ಒಲಿಂಪಿಕ್‌ ಕ್ರೀಡಾಕೂಟದ ಫೈನಲ್‌ ಪ್ರವೇಶಿಸಬೇಕು. ಸದ್ಯ, ನನ್ನ ಸಾಮರ್ಥ್ಯ ವೃದ್ಧಿ ಮಾಡಿಕೊಳ್ಳುವ ದಿಸೆಯಲ್ಲಿ ಸಿದ್ಧತೆ ನಡೆಸುತ್ತೇನೆ’ ಎಂದು ಅವರು ತಿಳಿಸಿದ್ದಾರೆ. 

‘ಏಷ್ಯನ್‌ ಕ್ರೀಡಾಕೂಟದ ಅರ್ಹತಾ ಸುತ್ತಿನ ನಂತರ ನನ್ನಲ್ಲಿ ವಿಶ್ವಾಸ ಹೆಚ್ಚಿತು. ಆಗ ಎರಡನೇ ಸ್ಥಾನದಲ್ಲಿದ್ದೆ. ಫೈನಲ್‌ ನಡೆಯುವ ಮುನ್ನ ಕಂಚಿನ ಪದಕ ಗೆಲ್ಲುವುದೇ ಗುರಿಯಾಗಿತ್ತು. ಕತಾರ್‌ ಹಾಗೂ ಜಪಾನ್‌ನ ಅಥ್ಲೀಟ್‌ಗಳನ್ನು ಮಣಿಸುವುದು ಸುಲಭವಲ್ಲ ಎಂಬುದು ಗೊತ್ತಿತ್ತು. ಆದರೆ, ಫೈನಲ್‌ನಲ್ಲಿ ಸಾಮರ್ಥ್ಯ ಮೀರಿ ಓಡಿದೆ’ ಎಂದೂ ತಿಳಿಸಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !